ಮತ್ತೆ ಪಾಕ್ ಶೆಲ್ ದಾಳಿ: 400 ಜನರು ಪ್ರಾಣಾಪಾಯದಿಂದ ಪಾರು

ಮತ್ತೆ ಪಾಕ್ ಶೆಲ್ ದಾಳಿ: 400 ಜನರು ಪ್ರಾಣಾಪಾಯದಿಂದ ಪಾರು

ಜಮ್ಮು, ಮಾ. 14, ನ್ಯೂಸ್ ಎಕ್ಸ್ ಪ್ರೆಸ್: ಜಮ್ಮು-ಕಾಶ್ಮೀರ ಗಡಿ ರೇಖೆಯ ಬಳಿಯಿರುವ ವಾಣಿಜ್ಯ ಕೇಂದ್ರವನ್ನು ಗುರಿಯಾಗಿಸಿ ಪಾಕಿಸ್ತಾನದ ಭದ್ರತಾ ಪಡೆಗಳು ಮಾ.13 ಭಾರೀ ಪ್ರಮಾಣದ ಶೆಲ್ ದಾಳಿ ನಡೆಸಿವೆ. ದಾಳಿಯಲ್ಲಿ ಸುಮಾರು 400 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಡಿ ನಿಯಂತ್ರಣ ರೇಖೆ ಬಳಿ ಚಕ್ಕನ್ ದ ಬಾಗ್ ಪ್ರದೇಶದಲ್ಲಿ ಉಭಯ ದೇಶಗಳ ನಡುವಿನ ವಹಿವಾಟಿಗೆ ಅವಕಾಶ ಕಲ್ಪಿಸುವ ಕೇಂದ್ರವೊಂದಿದೆ. ಮಾ. 13,ಬೆಳಗ್ಗೆ 10.45ರ ಸುಮಾರಿಗೆ ಪಾಕ್ ಪಡೆಗಳು ನಡೆಸಿದ ದಾಳಿ ವೇಳೆ ಒಂದು ಶೆಲ್ ವ್ಯಾಪಾರ ಕೇಂದ್ರದ ಹೊರಗಿನ ಸೇತುವೆ ಬಳಿ ಸ್ಫೋಟಗೊಂಡಿದೆ. ಮತ್ತೆರೆಡು ಶೆಲ್ಗಳು ವ್ಯಾಪಾರ ಕೇಂದ್ರದ ಆವರಣದೊಳಗೇ ಬಿದ್ದಿದೆ. ಈ ವೇಳೆ ಅಧಿಕಾರಿಗಳು, ಪೊಲೀಸರು, ವಲಸೆ ಅಧಿಕಾರಿಗಳು, ಕೂಲಿ ಕಾರ್ಮಿಕರು, ಗಡಿ ರೇಖೆಯ ವಾಣಿಜ್ಯೋದ್ಯಮಿಗಳು ಸೇರಿದಂತೆ ಇತರರು ಈ ಕೇಂದ್ರದಲ್ಲೇ ಇದ್ದರು. ಜನರು ವ್ಯಾಪಾರ ನಡೆಸುತ್ತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿಯೇ ಶೆಲ್ ಬಿದ್ದ ಕಾರಣ, 400 ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos