ಮೋದಿ ಮತ್ತೆ ಪ್ರಧಾನಿ ಆಗಲ್ಲ : ಸಿದ್ದರಾಮಯ್ಯ

ಮೋದಿ ಮತ್ತೆ ಪ್ರಧಾನಿ ಆಗಲ್ಲ : ಸಿದ್ದರಾಮಯ್ಯ

ಬೆಂಗಳೂರು, . 1, ನ್ಯೂಸ್ ಎಕ್ಸ್ ಪ್ರೆಸ್: ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು ಆಯೋಜನೆಗೊಂಡಿರುವ ಮಾಧ್ಯಮ ಮಾತು ಮಂಥನ ಎಂಬ ಸಂವಾದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ನವರು ಮಾತನಾಡಿದರು, ಈ ಬಾರಿ ಬಿಜೆಪಿ ಭಾವನಾತ್ಮಕ ವಿಷಯ ಮುಂದೆ ಇಟ್ಟರು ಕೂಡ ಯಾವುದೇ ಕಾರಣಕ್ಕೂ ಮೋದಿ ಮತ್ತೆ ಪ್ರಧಾನಿ ಆಗಲ್ಲ. ರಾಹುಲ್ ಗಾಂಧಿಯೇ ಪ್ರಧಾನಿ ಆಗುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

5 ವರ್ಷಗಳ ಹಿಂದೆ ನರೇಂದ್ರ ಮೋದಿ ಅವರ ಬಣ್ಣ ಬಣ್ಣದ ಮಾತಿಗೆ ಮರುಳಾಗಿ ಭಾರಿ ಬದಲಾವಣೆ ನಿರೀಕ್ಷೆಯಲ್ಲಿ ಜನರು ಅವರಿಗೆ ಅಧಿಕಾರ ಕೊಟ್ಟರು, ಇದನ್ನು ಕಂಡು ಇನ್ನೂ 10 ವರ್ಷ ಇದೇ ರೀತಿ ಬಣ್ಣದ ಮಾತಿನಿಂದ ಜನರನ್ನು ನಂಬಿಸಿ, ಅಧಿಕಾರ ನಡೆಸಬಹುದು ಎಂದು ಬಿಜೆಪಿಯವರು ಭಾವಿಸಿದ್ದರು.

ಆದರೆ, ಈಗ ಜನ ಎಚ್ಚೆತ್ತುಕೊಂಡಿದ್ದು, ಬದಲಾಗಿದ್ದಾರೆ ಎಂದರು.

ಕಪ್ಪು ಹಣದಿಂದ ಹಲವರು ನಿದ್ದೆ ಗೆಡುತ್ತಾರೆ ಅಂದಿದ್ದರು, ನಾನು ಇದುವರೆಗೆ ನಿದ್ದೆ ಗೆಟ್ಟವರನ್ನು ನೋಡಿಲ್ಲ. ಜನಗಳಿಗೆ ನಾವು ನಮ್ಮ ತಪ್ಪುಗಳನ್ನು ಮುಚ್ಚಿಕೊಂಡು ಬೇರೆ ರೀತಿಯ ಭಾವನಾತ್ಮಕ ವಿಷಯಗಳನ್ನು ತಿಳಿಸಬಾರದು ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಫ್ರೆಶ್ ನ್ಯೂಸ್

Latest Posts

Featured Videos