ವಾಹನ ಸವಾರರಿಗೆ ಶಾಕ್ ಕೊಟ್ಟ ಮೋದಿ: ಮತ್ತೆ ಏರಿಕೆ ಕಂಡ ಇಂಧನ ಬೆಲೆ

ವಾಹನ ಸವಾರರಿಗೆ ಶಾಕ್ ಕೊಟ್ಟ ಮೋದಿ: ಮತ್ತೆ ಏರಿಕೆ ಕಂಡ ಇಂಧನ ಬೆಲೆ

ನವದೆಹಲಿ, ಮಾ.5, ನ್ಯೂಸ್ ಎಕ್ಸ್ ಪ್ರೆಸ್:  ಪೆಟ್ರೋಲ್‍, ಡೀಸೆಲ್ ಬೆಲೆ ಮತ್ತೆ ಏರಿಕೆ ಕಂಡಿದೆ. ಈ ಮೂಲಕ ದೇಶದ ಪೆಟ್ರೋಲ್‍ ಬೆಲೆಯಲ್ಲಿ 7 ಪೈಸೆ, ಡೀಸೆಲ್ ಬೆಲೆಯಲ್ಲಿ 10 ರಿಂದ 11 ಪೈಸೆ ಹೆಚ್ಚಳ ಮಾಡುವ ಮೂಲಕ ದೇಶದ ಜನತೆಗೆ ಮತ್ತೆ ಮೋದಿ .

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್‍ಗೆ 7 ಪೈಸೆ ಏರಿಕೆಯಾಗಿದ್ದು, ಸದ್ಯ ಲೀಟರ್ ಪೆಟ್ರೋಲ್‍ ಗೆ 72.24 ರೂಪಾಯಿ ಆಗಿದೆ. ಡೀಸೆಲ್‍ ಬೆಲೆ 10 ಪೈಸೆ ಏರಿಕೆಯಾಗಿ ಪ್ರತಿ ಲೀಟರ್ ಡೀಸೆಲ್ ಬೆಲೆ 67.54 ರೂಪಾಯಿಗಳಾಗಿದೆ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್‍ ಬೆಲೆ 74.64 ತಲುಪಿದ್ರೆ, ಡೀಸೆಲ್‍ ಬೆಲೆ 69.88 ರೂ.ಗೆ ಮಾರಾಟವಾಗ್ತಿದೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್‍ ಗೆ 77.87 ರೂ. ಗೆ ಮಾರಾಟವಾಗ್ತಿದ್ದು, ಡೀಸೆಲೆ ಬೆಲೆ 70.86 ರೂಪಾಯಿಗಳಾಗಿದೆ. ಚೆನ್ನೈನಲ್ಲಿ 7 ಪೈಸೆ ಏರಿಕೆಯಿಂದ ಪೆಟ್ರೋಲ್ ಬೆಲೆ 75.02 ರೂಪಾಯಿ ಆಗಿದೆ. ಡೀಸೆಲ್ 71.49 ರೂ. ಗಳಿಗೆ ಮಾರಾಟವಾಗ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos