15 ಮಾತ್ರೆ ಸೇವಿಸಿ ಮಹಿಳೆ ಸಾವು

15 ಮಾತ್ರೆ ಸೇವಿಸಿ ಮಹಿಳೆ ಸಾವು

ಬೆಂಗಳೂರು,  ಸೆ. 11: ಏಕಕಾಲಕ್ಕೆ 15 ಮಾತ್ರೆ ಸೇವಿಸಿ ಮಹಿಳೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಅನುಸೂಯಮ್ಮ (45) ಮೃತ ದುರ್ದೈವಿ. 15 ವರ್ಷಗಳಿಂದ ತಲೆ ನೋವಿನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ತಲೆನೋವು ಹಿನ್ನಲೆ ನಿವಾರಣೆಗಾಗಿ 15 ಮಾತ್ರೆಗಳನ್ನು ಸೇವಿಸಿ ಕಾರ್ಮಿಕ ಮುನೇಶಪ್ಪ ಎಂಬವರ ಪತ್ನಿ ಅನುಸೂಯಮ್ಮ ವಿಪರೀತ ತಲೆ ನೋವು ಕಾಣಿಸಿಕೊಂಡ ಪರಿಣಾಮ ಅವರು ಏಕಾಏಕಿ 15 ಮಾತ್ರೆಗಳನ್ನು ಸೇವಿಸಿ ಪ್ರಜ್ಞೆ ಕಳೆದುಕೊಂಡಿದ್ದರು. ಕೂಡಲೇ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳಿದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos