ಮತ್ತೆ ಡಿಸಿಎಂ ಸ್ಥಾನಕ್ಕೆ ಬಿಜೆಪಿ ಸಜ್ಜು

ಮತ್ತೆ ಡಿಸಿಎಂ ಸ್ಥಾನಕ್ಕೆ ಬಿಜೆಪಿ ಸಜ್ಜು

ಬೆಂಗಳೂರು, ಸೆ. 7 : ಈಗಾಗಲೇ ಮೂರು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಿರುವ ಬಿಜೆಪಿ ಕೇಂದ್ರ ಸರ್ಕಾರ ಇದೀಗ ಪುನಃ ಮತ್ತೆರಡು ಡಿಸಿಎಂ ಸ್ಥಾನವನ್ನು ಸೃಷ್ಟಿಸಲು ಮುಂದಾಗಿದ್ದಾರೆ.
ಈ ಬಾರಿ ಪರಿಶಿಷ್ಟ ವರ್ಗ(ಎಸ್ಟಿ) ಹಾಗೂ ಕುರುಬ ಸಮುದಾಯದ ಇಬ್ಬರು ಪ್ರಭಾವಿ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ನೀಡುವ ಉದ್ದೇಶವನ್ನು ಬಿಜೆಪಿ ಹೊಂದಿದೆ.
ಪರಿಶಿಷ್ಟ ಸಮುದಾಯದಿಂದ ಬಿ.ಶ್ರೀರಾಮುಲು ಇಲ್ಲವೇ ಅನರ್ಹಗೊಂಡಿರುವ ಬೆಳಗಾವಿಯ ರಮೇಶ್ ಜಾರಕಿಹೊಳಿಗೆ ಡಿಸಿಎಂ ಸ್ಥಾನ ನೀಡಬೇಕೆಂಬ ಚಿಂತನೆ ವರಿಷ್ಠರಲ್ಲಿದೆ. ಕುರುಬ ಸಮುದಾಯದಿಂದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ , ಕಾಂಗ್ರೆಸ್ನಿಂದ ಅನರ್ಹaಗೊಂಡಿರುವ ಕೆ.ಆರ್.ಪುರಂನ ಭೈರತಿ ಬಸವರಾಜ್, ಜೆಡಿಎಸ್ನಿಂದ ಗೆದ್ದಿದ್ದ ಹುಣಸೂರಿನ ಎಚ್.ವಿಶ್ವನಾಥ್ ಮೂವರಲ್ಲಿ ಒಬ್ಬರಿಗೆ ಡಿಸಿಎಂ ಸ್ಥಾನ ಸಿಗುವುದು ಬಹುತೇಕ ಪಕ್ಕ ಆಗಿದೆ.

ಫ್ರೆಶ್ ನ್ಯೂಸ್

Latest Posts

Featured Videos