ಮಾತೆ ಮಹಾದೇವಿ ಕ್ರಿಯಾ ಸಮಾಧಿಗೆ ಸಕಲ ಸಿದ್ಧತೆ

ಮಾತೆ ಮಹಾದೇವಿ ಕ್ರಿಯಾ ಸಮಾಧಿಗೆ ಸಕಲ ಸಿದ್ಧತೆ

ಕೂಡಲಸಂಗಮ, ಮಾ.16, ನ್ಯೂಸ್ ಎಕ್ಸ್ ಪ್ರೆಸ್: ಲಿಂಗೈಕ್ಯರಾದ ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಜಗದ್ಗುರು ಡಾ.ಮಾತೆ ಮಹಾದೇವಿ ಅವರ ಕ್ರಿಯಾ ಸಮಾಧಿಗೆ ಕೂಡಲಸಂಗಮದ ಬಸವ ಧರ್ಮ ಪೀಠದಲ್ಲಿ ಸಕಲ ಸಿದ್ಧತೆ ಮಾಡಿದ್ದು, ಶನಿವಾರ ಅವರ ಕ್ರಿಯಾ ಸಮಾಧಿ ಕಾರ್ಯ ನೆರವೇರಲಿದೆ.

ಕೂಡಲಸಂಗಮ ಬಸವ ಧರ್ಮ ಪೀಠದ ಆವರಣದ ಶರಣ ಲೋಕದ ಘಣಲಿಂಗ ಮಂಟಪದಲ್ಲಿರುವ ಅಕ್ಕಮಹಾದೇವಿ ಮತ್ತು ಅಂತರ್ಜಾತಿ ವಿವಾಹ ಚಿತ್ರಪಟದ ಬಳಿ ಅವರ ಜೀವಿತ ಅವಧಿಯಲ್ಲಿಯೇ (24 ವರ್ಷಗಳ ಹಿಂದೆ) ಸಮಾಧಿ ನಿರ್ಮಾಣಗೊಂಡಿದ್ದು, ಮಾತೆ ಮಹಾದೇವಿ ಅವರು ಇದೇ ಸ್ಥಳದಲ್ಲಿ ಲಿಂಗೈಕ್ಯವಾಗಿ ಲಿಂಗದ ರೂಪದಲ್ಲಿ ದರ್ಶನ ನೀಡಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos