ಮತದಾನದ ಹಕ್ಕು ಚಲಾಯಿಸಿದ ಮೋದಿ

ಮತದಾನದ ಹಕ್ಕು ಚಲಾಯಿಸಿದ ಮೋದಿ

ಅಹಮದಾಬಾದ್ (ಗುಜರಾತ್,) ಏ. 23, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಗೆ ಇಂದು ದೇಶಾದ್ಯಂತ 3ನೇ ಹಂತದ ಮತದಾನ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್ನ ರಣಿಪ್ ಮತಗಟ್ಟೆಯಲ್ಲಿ ತಮ್ಮಮತದಾನದ ಹಕ್ಕನ್ನ ಚಲಾಯಿಸಿದರು. ನಂತರ ಬಿಜೆಪಿ ರಾಷ್ಟ್ರೀ ಅಧ್ಯಕ್ಷ ಅಮಿತ್ ಶಾ ಜೊತೆಗೂಡಿ ಮತಗಟ್ಟೆಯತ್ತ ಪ್ರಯಾಣ ಬೆಳೆಸಿದರು. ರಣಿಪ್ ನಲ್ಲಿರುವ ನಿಶಾನ್ ಹೈಯರ್ ಸೆಕೆಂಡರಿ ಸ್ಕೂಲ್ ಗೆ ತೆರಳಿ ಮತದಾನ ಮಾಡಿದರು.

ಈ ಮಧ್ಯೆ ಪ್ರಧಾನಿ ಮೋದಿಗೆ ಸಾವಿರಾರು ಮತದಾರರು ಸಾಥ್ ನೀಡಿದರು. ಈ ವೇಳೆ ಅಮಿತ್ ಶಾ ಅವರ ಮೊಮ್ಮಗಳನ್ನ ಎತ್ತಿಕೊಂಡು ಮತನಾಡಿಸಿದರು. ನಂತರ ವೋಟ್ ಹಾಕಿ ಮತನಾಡಿದ ಅವರು, ದೇಶದಲ್ಲಿ 3ನೇ ಹಂತದ ಚುನಾವಣೆ ನಡೆಯುತ್ತಿದೆ. ಗುಜರಾತಿನಲ್ಲಿ ನನ್ನ ಕರ್ತವ್ಯ ಪೂರೈಸುವ ಅವಕಾಶ ಸಿಕ್ಕಿದೆ. ದೇಶದ ಎಲ್ಲ ನಾಗರಿಕರೂ ತಪ್ಪದೇ ಮತಚಲಾಯಿಸಿ ಅಂತಾ ಮನವಿ ಮಾಡಿಕೊಂಡರು.

ಫ್ರೆಶ್ ನ್ಯೂಸ್

Latest Posts

Featured Videos