ಓಟರ್ ಐಡಿ ತರದೇ ಮತ ಹಾಕಲು ಬಂದ ರವಿ ಮಾಮ

ಓಟರ್ ಐಡಿ ತರದೇ ಮತ ಹಾಕಲು ಬಂದ ರವಿ ಮಾಮ

ಬೆಂಗಳೂರು, ಏ. 18, ನ್ಯೂಸ್ ಎಕ್ಸ್ ಪ್ರೆಸ್: ಮತಹಬ್ಬ ಲೋಕಸಭಾ ಚುನಾವಣೆಯಲ್ಲಿ ಪಾಲ್ಗೊಂಡಿರುವ ಚಿತ್ರರಂಗದ ಅನೇಕ ನಟ-ನಟಿಯರು ಕೂಡ ಮತದಾನ ಮಾಡಿ ಇತರರಿಗೂ ಮಾದರಿಯಾಗುತ್ತಿದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ಕುಟುಂಬ ಸಮೇತ ಬಂದು ರಾಜಾಜಿನಗರದ ಠಾಗೊರ್ ಆಂಗ್ಲ ಮಾಧ್ಯಮ ಶಾಲೆಗೆ ಬಂದು ರವಿಚಂದ್ರನ್ ಓಟ್ ಮಾಡಿದ್ದಾರೆ. ಆದರೆ ಮತ ಹಾಕಲು ಬಂದ ಕ್ರೇಜಿಸ್ಟಾರ್ ವೊಟರ್ ಐಡಿ ತರಲು ಮರೆತಿದ್ದರು.

ಚುನಾವಣಾ ಸಿಬ್ಬಂದಿಯವರಿಗೆ, ನಾನು ಆ ನಂತರ ಓಟರ್ ಐಡಿ ತಂದು ತೋರಿಸುತ್ತೇನೆ ಎಂದರು, ಇಲ್ಲವಾದರೇ ಐಡಿ ಬರುವ ತನಕ ಕಾಯುವೆ ಎಂದು ಹೇಳಿದ್ದಾರೆ.

ಕೊನೆಗೆ ಸಿಬ್ಬಂದಿ ರವಿಚಂದ್ರನ್ ಅವರಿಗೆ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ರವಿಚಂದ್ರನ್ ಮಕ್ಕಳು ಕೂಡ ಐಡಿ ಕಾರ್ಡ್ ಮರೆತು ಬಂದಿದ್ದರು. ನಂತರ ಮತಗಟ್ಟೆ ಕೇಂದ್ರದಿಂದ ವಾಪಸ್ ಮನೆಗೆ ಹೋಗಿ ಐಡಿ ಕಾರ್ಡ್ ತಂದು ಮತ್ತೆ ಮತದಾನ ಮಾಡಿದ್ದಾರೆ.

ನಾವು ಬದುಕಿದ್ದೇವೆ ಎಂದು ಗೊತ್ತಾಗ ಬೇಕಾದರೇ ದಯಮಾಡಿ ಮತದಾನ ಮಾಡಿ. ನಮ್ಮ ನಾಯಕರನ್ನು ನಾವೇ ಆರಿಸೋಣ, ಪ್ರತೀ ಬಾರಿಯೂ ನಾನು ಓಟ್ ಮಾಡುವಾಗ ಜನರು ಕಡಿಮೇ ಇರುತ್ತಾರೆ. ಇಂದು ಕೂಡ ಜನ ಕಡಿಮೆ. ಏಳಿ, ಎದ್ದೇಳಿ ಮತದಾನ ಮಾಡುವುದನ್ನು ಮರೆಯಬೇಡಿ ಎಂದು ಕರೆ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos