ಕೊನೆಯ  ಹಂತದ ಶೂಟಿಂಗ್ನಲ್ಲಿ ‘ಮಾರ್ಟಿನ್’ ಸಿನಿಮಾ

ಕೊನೆಯ  ಹಂತದ ಶೂಟಿಂಗ್ನಲ್ಲಿ ‘ಮಾರ್ಟಿನ್’ ಸಿನಿಮಾ

ಬೆಂಗಳೂರು: ನಮ್ಮ ಸ್ಯಾಂಡಲ್ ವುಡ್ನ ಅನೇಕ ಟಾಪ್ ನಟರಲ್ಲಿ ಧ್ರುವ ಸರ್ಜಾ ಕೂಡ ಒಬ್ಬರು, ಇವರು ಮಾಡಿದ ಒಂದೇ ಒಂದು ಸಿನಿಮಾದಲ್ಲಿ ಅತ್ಯಂತ ದೊಡ್ಡ ಮಟ್ಟದ ಯಶಸ್ಸನ್ನು ಕಂಡರು. ಈ ಸಿನಿಮಾದಿಂದ ಅಭಿಮಾನಿಗಳು ಆಕ್ಷನ್ ಪ್ರಿನ್ಸ್ ಎಂದು ಕರೆಯುತ್ತಾರೆ. ಸ್ಯಾಂಡಲ್ ವುಡ್ ನ ಟಾಪ್ ನಟರಾಗಿ ಹೆಸರು ಪಡೆದುಕೊಂಡರು.

ಆಕ್ಷನ್ ಪ್ರಿನ್ಸ್  ಧ್ರುವ ಸರ್ಜಾ ನಟನೆಯ ‘ಪೊಗರು’ ಸಿನಿಮಾ ರಿಲೀಸ್ ಆಗಿ ಮೂರು ವರ್ಷ ಕಳೆಯುತ್ತಾ ಬಂದಿದೆ. ಈ ಸಿನಿಮಾ ಆದ ಬಳಿಕ ಅವರು ‘ಮಾರ್ಟಿನ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆದರು. ಫೆಬ್ರವರಿ 10ರಿಂದ ಕೊನೆಯ ಹಂತದ ಶೂಟಿಂಗ್ ಆರಂಭ ಆಗಲಿದೆಯಂತೆ.

ಮೊದಲನೆಯ ಸಾಂಗ್ ಇಂಟ್ರೋಡಕ್ಷನ್ ಸಾಂಗ್. ಮತ್ತೊಂದು ರೊಮ್ಯಾಂಟಿಕ್ ಸಾಂಗ್ ಆಗಿದ್ದು ಇದನ್ನು ಭಾರತದ ವಿವಿಧ ಕಡೆಗಳಲ್ಲಿ ಶೂಟ್ ಮಾಡುವ ಆಲೋಚನೆಯಲ್ಲಿ ತಂಡ ಇದೆ. ಮಾರ್ಟಿನ್ ತಂಡ ಸೂಕ್ತ ರಿಲೀಸ್ ದಿನಾಂಕ ಹುಡುಕುತ್ತಿದೆ. ಈ ಬಗ್ಗೆ ಶೀಘ್ರವೇ ಅಧಿಕೃತ ಘೋಷಣೆ ಆಗಬೇಕಿದೆ. ಇತ್ತೀಚೆಗೆ ‘ಮಾರ್ಟಿನ್’ಸಿನಿಮಾದ ಆಡಿಯೋ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟ ಆದ ಬಗ್ಗೆ ಸುದ್ದಿ ಆಗಿತ್ತು.

‘ಮಾರ್ಟಿನ್’ ಚಿತ್ರಕ್ಕೆ ಅರ್ಜುನ್ ಸರ್ಜಾ ಅವರು ಕಥೆ ಬರೆದಿದ್ದಾರೆ. ಎಪಿ ಅರ್ಜುನ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ವೈಭವಿ ಶಾಂಡಿಲ್ಯ ಅವರು ಈ ಚಿತ್ರಕ್ಕೆ ನಾಯಕಿ. ಅನ್ವೇಶಿ ಜೈನ್, ಸುಕ್ರತಾ ವಾಗ್ಲೆ, ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್ ಮೊದಲಾದವರು ನಟಿಸಿದ್ದಾರೆ.  ಕಳೆದ ವರ್ಷ ರಿಲೀಸ್ ಆದ ‘ಮಾರ್ಟಿನ್’ ಟೀಸರ್ ಗಮನ ಸೆಳೆದಿತ್ತು. ಸಿನಿಮಾ ರಿಲೀಸ್ ಡೇಟ್​ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos