ಮರಳಿನಲ್ಲಿ ಮೂಡಿ ಬಂದ ಮತದಾನ ಜಾಗೃತಿ ಶಿಲ್ಪ

ಮರಳಿನಲ್ಲಿ ಮೂಡಿ ಬಂದ ಮತದಾನ ಜಾಗೃತಿ ಶಿಲ್ಪ

ಮಂಗಳೂರು, . 10, ನ್ಯೂಸ್ ಎಕ್ಸ್ ಪ್ರೆಸ್: ಮಂಗಳೂರಿನ ಉಳ್ಳಾಲ ಕಡಲ ತೀರದಲ್ಲಿ ಸಾಂಸ್ಕೃತಿಕ ಜಾತ್ರೆ ನಡೆದಿತ್ತು. ಮರಳಿನ ಮೇಲೆ ಅದ್ಭುತ ಕಲಾಕೃತಿಗಳು ಮೂಡಿ ಬಂದಿದ್ದವು. ಒಂದೆಡೆ ಮತದಾನ ಜಾಗೃತಿ ಮೂಡಿಸುವ ಮರಳಿನ ಆಕೃತಿ ಇದ್ದರೆ, ಮತ್ತೊಂದೆಡೆ ಯೋಗ ಮಾಡಿ ಧೂಮಪಾನದಿಂದ ದೂರವಿರಿ ಎಂಬ ಸುಂದರ ಕಲಾಕೃತಿಗಳು ಕಂಡು ಬಂದವು.

ತಪ್ಪದೆ ಮತದಾನ ಮಾಡಬನ್ನಿ’ ಎಂಬ ಘೋಷ ವಾಕ್ಯದಡಿ ಜಿಲ್ಲಾಡಳಿತದ ವತಿಯಿಂದ ಉಳ್ಳಾಲ ನಗರಸಭೆ ನೇತೃತ್ವದಲ್ಲಿ ಉಳ್ಳಾಲದ ಸಮುದ್ರ ತೀರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಮತದಾನ ಜಾಗೃತಿ ಹಬ್ಬ ನಡೆಯಿತು.

ಈ ಕಾರ್ಯಕ್ರಮದಲ್ಲಿ ಜಯಪ್ರಸಾದ್ ಆಚಾರ್ಯ ಅವರ ಸ್ಪರ್ಶ ತಂಡದಿಂದ ನಿರ್ಮಾಣವಾದಂತಹ ಮರಳು ಶಿಲ್ಪಗಳು ಅದ್ಭುತವಾಗಿ ಮೂಡಿ ಬಂದಿದ್ದವು. ಒಂದೆಡೆ ಭಾರತದ ಚಿತ್ರ, ಮತದಾನ ಮಾಡುವ ಚಿತ್ರವನ್ನು ಮರಳಿನಲ್ಲಿ ಚಿತ್ರಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos