ಫರ್ಪ್ಯೂಮ್ ಉದ್ಯಮ ನಡೆಸುತ್ತಿದ್ದ ಮನ್ಸೂರ್!

ಫರ್ಪ್ಯೂಮ್ ಉದ್ಯಮ ನಡೆಸುತ್ತಿದ್ದ ಮನ್ಸೂರ್!

ಬೆಂಗಳೂರು, ಜೂ. 26: ನಗರದಲ್ಲಿ ಸಾವಿರಾರು ಜನರಿಗೆ ನಂಬಿಸಿ ಹಣದ ಮೋಸ ಮಾಡಿರುವ ಐಎಂಎ ಮುಖ್ಯಸ್ಥ ಮನ್ಸೂರ್.  ಸಾವಿರಾರು ಕೋಟಿ ರೂ. ವಂಚಿಸಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಐಎಂಎ ಮುಖ್ಯಸ್ಥ ಮೊಹಮದ್ ಮನ್ಸೂರ್ ಖಾನ್ ಅವರ ಫರ್ಫ್ಯೂಮ್ ಮಳಿಗೆ ಪತ್ತೆಯಾಗಿದೆ.

ಐಎಂಎ ವಂಚನೆ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ರವಿಕಾಂತೇಗೌಡ ನೇತೃತ್ವದ ಎಸ್ ಐಟಿ ತಂಡ ಬೆಂಗಳೂರಿನ ಶಿವಾಜಿನಗದಲ್ಲಿ ಮನ್ಸೂರ್ ಖಾನ್ ನಡೆಸುತ್ತಿದ್ದ ಪರ್ಫ್ಯೂಮ್ ಮಳಿಗೆಯನ್ನು ಪತ್ತೆ ಹಚ್ಚಿದೆ.

ರಯಾನ್ ಹೆಸರಿನಲ್ಲಿ ಪರ್ಫ್ಯೂಮ್ ಉದ್ಯಮವನ್ನು ಮನ್ಸೂರ್ ಖಾನ್ ನಡೆಸುತ್ತಿದ್ದು, 5 ಕೋಟಿ ರೂ. ವೆಚ್ಚದಲ್ಲಿ ಐಷಾರಾಮಿ ಮಳಿಗೆಯನ್ನು ತೆರೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇರಾಕ್, ಇರಾನ್ ಸೇರಿದಂತೆ 23 ದೇಶಗಳಿಂದ ದುಬಾರಿ ಬೆಲೆಯ ಪರ್ಫ್ಯೂಮ್ ಗಳನ್ನು ಆಮದು ಮಾಡಿಕೊಂಡು ಈ ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇದೀಗ ಈ ಮಳಿಗೆಗೂ ಕೂಡ ಎಸ್ ಐಟಿ ಬೀಗ ಮುದ್ರೆ ಹಾಕಿದ್ದು, ಮೌಲ್ಯಮಾಪನ ನಡೆಸುತ್ತಿದೆ.

 

ಫ್ರೆಶ್ ನ್ಯೂಸ್

Latest Posts

Featured Videos