ಮನೆಗೆ ನುಗ್ಗಿದ ‘ಕರಡಿ’

ಮನೆಗೆ ನುಗ್ಗಿದ ‘ಕರಡಿ’

ಕೊಲೊರಾಡೊ, ಆ.13 : ಆಹಾರವನ್ನು ಅರಸಿ ಪ್ರಾಣಿಗಳು ಮನೆಗಳಿಗೆ ದಾಳಿ ಇಡುವುದು ಇತ್ತೀಚಿಗೆ ಸಹಜವಾಗಿದೆ. ಆದರೆ ಇಲ್ಲೊಂದು ಕರಡಿ ಮನೆಗೆ ನುಗ್ಗಿ, ಅಲ್ಲಿಂದ ತಪ್ಪಿಸಿಕೊಳ್ಳಲು ಗೋಡೆ ಕೊರೆದ ಘಟನೆ ನಡೆದಿದೆ. ಕೊಲೊರಾಡೊದ ಈಸ್ಟ್ ಪಾರ್ಕ್ನಲ್ಲಿ ಈ ಘಟನೆ ನಡೆದಿದೆ. ಮನೆಯೊಳಗೆ ನುಗ್ಗಿದ ಕರಡಿ, ಪೊಲೀಸರು ಹಾಗೂ ಸಾರ್ವಜನಿಕರು ಮನೆಯೊಳಗೆ ಬರುತ್ತಿರುವುದನ್ನು ಗಮನಿಸಿ ಗೋಡೆ ಕೊರೆದು ಪರಾರಿಯಾಗಿರುವ ಫೋಟೋಗಳನ್ನು ಸ್ಥಳೀಯ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಈ ಬಗ್ಗೆ ಎಚ್ಚರಿಕೆ ನೀಡಿರುವ ಪೊಲೀಸರು, ಮನುಷ್ಯರು ಬರುವ ವಾಸನೆ ಸಿಗುತ್ತಿದ್ದಂತೆ ತಪ್ಪಿಸಿಕೊಳ್ಳಲು ಈ ರೀತಿ ಮಾಡಿರುವ ಸಾಧ್ಯತೆಯಿದೆ. ಆದ್ದರಿಂದ ಮುಂದಿನ ದಿನದಲ್ಲಿ ಮನೆಯಿಂದ ಹೋಗುವಾಗ ಸಾರ್ವಜನಿಕರು ಕಿಟಿಕಿಗಳನ್ನು ಸರಿಯಾಗಿ ಹಾಕುವಂತೆ ಮನವಿ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos