ನೋಡಲೇಬೇಕಾದ ನಕ್ಷತ್ರಾಕಾರದ ಮಂಜರಾಬಾದ್ ಕೋಟೆ

ನೋಡಲೇಬೇಕಾದ ನಕ್ಷತ್ರಾಕಾರದ ಮಂಜರಾಬಾದ್ ಕೋಟೆ

ಹಾಸನ, ಏ. 29, ನ್ಯೂಸ್ ಎಕ್ಸ್ ಪ್ರೆಸ್: ನಮ್ಮ ಭಾರತ ದೇಶದಲ್ಲಿ ಅನೇಕ ಸುಂದರವಾದ, ಭವ್ಯವಾದ ಕೋಟೆಗಳು ಇವೆ. ಅವುಗಳೆಲ್ಲಾ ತನ್ನದೇ ಆದ ಐತಿಹಾಸಿಕ ಚರಿತ್ರೆಯನ್ನು ಹೊಂದಿರುವ ಅದ್ಭುತವಾದ ಕೋಟೆಗಳು. ಭಾರತವು ಶ್ರೀಮಂತವಾದ, ಸಾಂಸ್ಕøತಿಕ ಪರಂಪರೆಯನ್ನು ಮತ್ತು ಇತಿಹಾಸವನ್ನು ಹೊಂದಿದೆ. ಕೋಟೆಗಳು ಎಂದರೆ ಚಿಕ್ಕ ಮಕ್ಕಳಿಗೇ ಅಲ್ಲದೇ ದೊಡ್ಡವರ ತನಕವು ಕುತೂಹಲ ಕೆರೆಳಿಸುತ್ತವೆ. ಕೋಟೆಗಳು ಅನೇಕ ರಾಜರ ಆಡಳಿತ, ಯುದ್ಧಗಳು, ಅವರ ಅಭಿರುಚಿಗೆ ತಕ್ಕಂತೆ ನಿರ್ಮಾಣ ಮಾಡಿದ ವಾಸ್ತುಶಿಲ್ಪಗಳನ್ನು ನೋಡುವುದು ಅಥವಾ ಅದರ ಬಗ್ಗೆ ತಿಳಿದುಕೊಳ್ಳುವುದೇ ಒಂದು ಸುಂದರವಾದ ಅನುಭೂತಿಯನ್ನು ಉಂಟು ಮಾಡುವಂತಹುದು. ಅನೇಕ ರಾಜರ ಆಳ್ವಿಕೆಯನ್ನು ಕಂಡಿರುವ ಪುಣ್ಯ ಭೂಮಿಗಳಲ್ಲಿ ನಮ್ಮ ಕರ್ನಾಟಕವು ಒಂದು. ನಮ್ಮ ಕರ್ನಾಟಕದಲ್ಲಿಯೂ ಅನೇಕ ವೀರರು ಭದ್ರವಾದ ಕೋಟೆಗಳನ್ನು ನಿರ್ಮಾಣ ಮಾಡಿದ್ದಾರೆ. ಅವರಲ್ಲಿ “ಮೈಸೂರಿನ ಹುಲಿ” ಎಂದೇ ಪ್ರಸಿದ್ಧವಾಗಿದ್ದ ಟಿಪ್ಪು ಸುಲ್ತಾನ್ ಕೂಡ ಒಬ್ಬ. ಟಿಪ್ಪು ವಿಭಿನ್ನವಾಗಿ ನಕ್ಷಾತ್ರಾಕಾರದ ಕೋಟೆಯನ್ನು ನಮ್ಮ ಕರ್ನಾಟಕ ರಾಜ್ಯದಲ್ಲಿ ನಿರ್ಮಾಣ ಮಾಡಿದ್ದಾರೆ.  ನಮ್ಮ ರಾಜ್ಯದ ಉತ್ತಮ ಮತ್ತು ಸುರಕ್ಷಿತ ಪ್ರವಾಸಿ ತಾಣಗಳಲ್ಲಿ ಒಂದು ಸಕಲೇಶಪುರ. ಇತ್ತೀಚೆಗೆ ಬೇಟಿ ಕೊಟ್ಟ ಸಂದರ್ಭದಲ್ಲಿ ಪ್ರಕೃತಿಯ ಮಡಿಲಲ್ಲಿ ಕಂಡು ಬಂದ 1972ರಲ್ಲಿ ನಿರ್ಮಾಣ ಆದಂತಹ  ಪ್ರಾನ್ಸನ ಶಿಲ್ಪಶಾಸ್ತ್ರವನ್ನು ಅಳವಡಿಸಿ ಕೊಂಡ ಸುಲ್ತಾನ್ ಟಿಪ್ಪೂ ವಿನ ಭವ್ಯವಾದ ನಕ್ಷತ್ರ ಆಕೃತಿಯ ಮಂಜರಾಬಾದ್  ಕೋಟೆ. ಈ ಪ್ರಕ್ರತಿದತ್ತವಾದ ಸುಂದರವಾದ ಪರಿಸರದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ  ಉದ್ಯಮವಾದ ಪ್ರವಾಸೋದ್ಯಮ ಕ್ಷೇತ್ರದ ಯಾವುದೇ ಕುರುಹುಗಳಾಗಲಿ ಕಂಡು ಬರಲಿಲ್ಲ. (ಕೇಂದ್ರ ಪುರಾತತ್ವ ಇಲಾಖೆಗೆ (ARI) ಸಂಬಂಧ ಪಟ್ಟ ಒಂದು ಫಲಕವೊಂದಿದೆ)  ಅನೇಕ ವಿಭಿನ್ನವಾದ ಕೋಟೆಗಳನ್ನು ನೀವು ನೋಡಿದ್ದೀರಾ, ಆದರೆ ಅದ್ಭುತವಾದ ನಕ್ಷತ್ರಾಕಾರದ ಕೋಟೆಯನ್ನು ನೋಡಿದ್ದೀರಾ? ಹಾಗಾದರೆ ಒಮ್ಮೆ ಸಕಲೇಶ್ವರದ ಮಂಜರಾಬಾದ್ ಕೋಟೆಗೆ ಭೇಟಿ ನೀಡಿ. ಈ ಕೋಟೆಗೆ ತೆರಳಲು 250 ಮೆಟ್ಟಿಲುಗಳನ್ನು ಏರಿ ಹೋಗಬೇಕು. ಈ ಕೋಟೆಯು ಅತ್ಯಂತ ಆಕರ್ಷಕವಾಗಿದ್ದು, ಅನೇಕ ಪ್ರವಾಸಿಗರು ವಾರಾಂತ್ಯದ ಸಮಯದಲ್ಲಿ ಭೇಟಿ ನೀಡುತ್ತಿರುತ್ತಾರೆ. ಎಂಟು ಕೋನವನ್ನು ಹೊಂದಿರುವ ಕೋಟೆ ಈ ಸುಂದರವಾದ ಕೋಟೆಯು ಸಮುದ್ರ ಮಟ್ಟದಿಂದ ಸುಮಾರು 3240 ಅಡಿ ಎತ್ತರದಲ್ಲಿದ್ದು, ಸುಮಾರು 5 ಎಕರೆ ಪ್ರದೇಶದಲ್ಲಿ ಎಂಟು ಕೋನದ ನಕ್ಷಾತ್ರಾಕಾರದಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಕೋಟೆಯನ್ನು ಇಸ್ಲಾಮಿಕ್ ವಾಸ್ತು ಶಿಲ್ಪ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.

ಈ ಕೋಟೆಯನ್ನು 5 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಿದ್ದಾರೆ. ಕೋಟೆಯ ಒಳಗಡೆ ನೀರಿನ ಕೊಳ, ಮದ್ದು ಗುಂಡು ಸಂಗ್ರಹಿಸುವ ಸ್ಥಳ, ಊಟದ ಗೃಹ, ಸ್ನಾನದ ಗೃಹ, ಶಯನ ಗೃಹ ಹಾಗು ಶೌಚಾಲಯಗಳು ಕೂಡ ಇವೆ. ಅಷ್ಟೇ ಅಲ್ಲ ಈ ಕೋಟೆಯಲ್ಲಿ ಒಂದು ಸುರಂಗ ಮಾರ್ಗಗಳು ಇವೆ ಎಂದು ಹೇಳಲಾಗುತ್ತಿದೆ. ಆ ಸುರಂಗಗಳು ನೇರವಾಗಿ ಶ್ರೀರಂಗಪಟ್ಟಣಕ್ಕೆ ಸಂಪರ್ಕ ಹೊಂದಿದೆ ಎಂದು ನಂಬಲಾಗಿದೆ. ಸರಕಾರ ಮುಂದೆ ಪ್ರವಾಸಿಗಳಿಂದ ಇಂತಹ ಸ್ಥಳಗಳು ಅಂದ ಕೆಡುವ ಮೊದಲು ಮತ್ತು ಹಸಿರು ನ್ಯಾಯದ ಹೆಸರಲ್ಲಿ ಹೊರಡುವವರ ಕಣ್ಣಿಗೆ ಬೀಳುವ ಮೊದಲು ಸುರಕ್ಷಿತ ಮತ್ತು ಜನಪ್ರಿಯ ತಾಣವಾಗಿ ಮಾಡಿ ನಮ್ಮ ರಾಜ್ಯದ ಉದ್ಯಮಿಗಳಿಗೆ ತೊಡಗಿಸಿಕೊಳ್ಳಲು  ಅವಕಾಶ ಆದೇ ರೀತಿ ಯುವ ವಿದ್ಯಾವಂತ ಯುವಕರಿಗೆ ಉದ್ಯೋಗ ಕೊಡಿಸಬಹುದು. ಈ ಭಾಗದ ಅತ್ಯುತ್ತಮ ಪ್ರವಾಸಿ ತಾಣವಾದ ಇಲ್ಲಿ ಯಾವುದೇ ವ್ಯವಸ್ಥೆ ಇಲ್ಲ, ಇಲ್ಲಿ ಗ್ರಾಮ ಪಂಚಯತಿಯಿಂದ ವಾಹನ ನಿಲುಗಡೆಗೆ ಶುಲ್ಕ ಕಲೆಕ್ಷನ್ನಿಗೆ ಒಬ್ಬ ಜವಾನ  ಬಿಟ್ಟರೆ ರಾಜ್ಯ ಸರ್ಕಾರದ ಯಾವುದೇ ಕುರುಹುಗಳು ಇಲ್ಲ.  ಮ್ಯೆಸೂರು ಹುಲಿ ಟಿಪ್ಪುಸುಲ್ತಾನ್ ದಿನಾಚರಣೆಗಳನ್ನು ಮಾಡುವ ನಮಗೆ ಇಂದು ಸುಲ್ತಾನ ಅವರ ಕೋಟೆಗಳನ್ನು ಸುರಕ್ಷಿತವಾಗಿ ರಕ್ಷಿಸುವುದು ಮತ್ತು ಆದರಿಂದ ರಾಜ್ಯ ಸರ್ಕಾರಕ್ಕು ಕೇಂದ್ರ ಸರ್ಕಾರಕ್ಕೂ, ಗ್ರಾಮೀಣ ಬಾಗದ ಜನರಿಗೆ ಆದಾಯ ಬರುವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಜನೆ ರೂಪಿಸುವಲ್ಲಿ ಹಿಂದೆ ಬಿದ್ದಿದೆ. ಇನ್ನಾದರೂ ಸಂಬಂಧ ಪಟ್ಟವರು ಕಣ್ಣು ತೆರೆಯಲಿ ಮುಂದಿನ ದಿನಗಳಲ್ಲಿ ಶೈಕ್ಷಣಿಕ ಪ್ರವಾಸಿಗಳಿಗೆ ಪ್ರವಾಸಕ್ಕಾಗಿಯಾಗಲಿ ಈ ಪ್ರಸಿದ್ದ ತಾಣ ಉಳಿಯಲಿ ಎಂದು ನಮ್ಮ ಬಯಕೆ.

ಫ್ರೆಶ್ ನ್ಯೂಸ್

Latest Posts

Featured Videos