ಮಾವು ಪ್ರಿಯರಿಗೆ ಇಲ್ಲಿದೆ ಶಾಕಿಂಗ್ ಸುದ್ದಿ..!

ಮಾವು ಪ್ರಿಯರಿಗೆ ಇಲ್ಲಿದೆ ಶಾಕಿಂಗ್ ಸುದ್ದಿ..!

ಬೆಂಗಳೂರು, ಮೇ.8, ನ್ಯೂಸ್ ಎಕ್ಸ್ ಪ್ರೆಸ್: ಹಣ್ಣುಗಳ ರಾಜ ಎಂದೇ ಕರೆಯಲ್ಪುವ ಮಾವಿನಹಣ್ಣು ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ರುಚಿ ರುಚಿಯಾದ ಈ ಹಣ್ಣನ್ನು ಬೇಡ ಅನ್ನೋರೇ ಇಲ್ಲ. ಅಂದವಾದ ಬಣ್ಣ ಹಾಗೂ ರುಚಿಯ ಮೂಲಕ ಇದನ್ನು ಹಣ್ಣುಗಳ ರಾಜ ಅಂತಾನೆ ಕರೀತಾರೆ. ಬೇಸಿಗೆಯಲ್ಲಂತೂ ಮಾರುಕಟ್ಟೆಯಲ್ಲಿ ಈ ಮಾವಿನಹಣ್ಣುಗಳದ್ದೇ ಕಾರುಬಾರು. ಎತ್ತ ನೋಡಿದ್ರೂ ವಿಧ ವಿಧದ ಮಾವಿನ ಹಣ್ಣುಗಳದ್ದೇ ಹಾವಳಿ. ಈ ಮಾವನ್ನು ಕೊಳ್ಳೋಕೆ ಗ್ರಾಹಕರು ಮುಗಿ ಬೀಳ್ತಿರ್ತಾರೆ. ಆದ್ರೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರೋ ಮಾವು ಈಗ ಜನರ ಜೀವ ತೆಗೆಯೋ ವಿಷ ಹಣ್ಣು ಅನ್ನೋ ಶಾಕಿಂಗ್ ವಿಚಾರವೊಂದು ಬೆಳಕಿಗೆ ಬಂದಿದೆ. ಪುಡಿಗಾಸಿನ ಆಸೆಗಾಗಿ‌ ಮಾವು ಮಾರಾಟಗಾರರು ಮಾಡೋ ನೀಚ ಕೆಲಸ ಜನರ ಪ್ರಾಣಕ್ಕೇ ಸಂಚಕಾರ ತಂದೊಡ್ಡುತ್ತಿದೆ..! ಹೌದು.. ಸದ್ಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯಲ್ಲಿರೋ ಹಾಗೂ ಅಧಿಕ ಬೆಲೆಯಾದರೂ‌ ಸಿಕ್ಕಾಪಟ್ಟೆ ಮಾರಾಟವಾಗ್ತಿರೋ ಮಾವಿನಹಣ್ಣಿಗೆ ವಿಷದ ರಾಸಾಯನಿಕ ಬಳಸಲಾಗುತ್ತಿದೆ ಎಂಬ ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ. ಎಳೆಯ ಕಾಯಿಯನ್ನು ಮರದಿಂದ ಕಿತ್ತು ಅದಕ್ಕೆ ವಿಷಕಾರಿ ರಾಸಾಯನಿಕ ಕ್ಯಾಲ್ಸಿಯಂ ಕಾರ್ಬೈಡ್ ಹಾಗೂ ಎಥಿಲೀನ್ ಹಾಕಿ ಹಣ್ಣಾಗುವಂತೆ ಮಾಡುತ್ತಿದ್ದಾರೆ. ಅಲ್ಲದೇ ಮಾವಿನ ಕಲರ್ ಕೂಡ ಚೆನ್ನಾಗಿ ಬರಲು ರಾಸಾಯನಿಕಗಳನ್ನು ಬಳಸಿ ಬೆಂಗಳೂರಿನ ಕೆಲ ಶಾಪ್ ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇಂತಹ ವಿಷಕಾರಿ ಹಣ್ಣುಗಳ ಸೇವನೆಯಿಂದ ಜನರಿಗೆ ಹೊಟ್ಟೆನೋವು, ಆಮಶಂಕೆ, ಬಾಯಲ್ಲಿ ಹುಣ್ಣು ಹಾಗೂ‌ ಮಾರಕ ಕ್ಯಾನ್ಸರ್ ಗಳಿಗೂ ತುತ್ತಾಗುವ ಸಾಧ್ಯತೆ ಹೆಚ್ವಿದೆ.

ಫ್ರೆಶ್ ನ್ಯೂಸ್

Latest Posts

Featured Videos