ಮಾವಿನ ಮರ 365 ದಿನವೂ ಫಲ ಕೊಡುತ್ತಾ?

ಮಾವಿನ ಮರ 365 ದಿನವೂ ಫಲ ಕೊಡುತ್ತಾ?

ಬಳ್ಳಾರಿ, ಡಿ. 31 : ವಸಂತ ಕಾಲ ಆರಂಭ ಆಗುತ್ತಿದ್ದಂತೆಯೇ ಮಾವು ಚಿಗುರು ಹೊಡೆದು ಮಾವಿನ ಮರಗಳಲ್ಲಿ ಹೂ ಬಿಡಲು ಪ್ರಾರಂಭ ಆಗಿ ಮಾವಿನ ಹಣ್ಣಿನ ಕಾಲ ಆರಂಭ ಆಗುತ್ತದೆ. ಆಗ ಕೊಗಿಲೆಗಳ ಗಾನ ಕೇಳೋದಕ್ಕೆ ಇಂಪಾಗಿರುತ್ತದೆ.
ಪ್ರಕೃತಿಯ ನಿಯಮಾನುಸಾರ ಆಯಾ ಋತುಮಾನ, ಹವಾಗುಣಕ್ಕೆ ಅನುಗುಣವಾಗಿ ಹಣ್ಣು, ತರಕಾರಿ ಬೆಳೆಯುವ ಕಾಲ ಇದಲ್ಲ . ಈ ಮಾತಿಗೆ ಪೂರಕವಾಗಿ ಮಳೆಗಾಲ, ಚಳಿಗಾಲ, ಬೇಸಿಗೆ ಗಾಲವೆನ್ನದೆ ವರುಷದ 365 ದಿನವೂ ಈ ಮಾವು ಫಲ ಕೊಡುವುದು ವಿಶೇಷ. ಮಾವಿನ ಮರ ಸೋಜಿಗ ನಮ್ಮ ಕಣ್ಣ ಮುಂದಿದೆ.
ಮಾವು 365 ದಿನವೂ ಫಲ ಕೊಡುತ್ತಾ? ಬಳ್ಳಾರಿಯ ಕುಮಾರಸ್ವಾಮಿ ದೇವಾಲಯದಲ್ಲಿದೆ ವಿಶೇಷ ಮಾವಿನ ಮರ! ಇದು ಪ್ರತಿದಿನವೂ ಕೊಡತ್ತಂತೆ ಮಾವು… ಈ ಸುದ್ದಿ ಕೇಳಿದ ಭಕ್ತರಿಗೆ ಅಚ್ಚರಿಯೋ ಅಚ್ಚರಿ.

ಕೇವಲ ಸೀಜನ್ನಲ್ಲಿ ಮಾತ್ರ ಮಾವು ಸಿಗೋದು ನೋಡಿದಿವಿ. ಈಗಿನ ಹೈಬ್ರಿಡ್ ಕಾಲದಲ್ಲಿ ಆರು ತಿಂಗಳವರೆಗೆ ಮಾವು ಸಿಗಬಹುದೇನೋ. ಆದರೆ ಇಲ್ಲಿ ವರ್ಷಪೂರ್ತಿ ಫಲ ಕೊಡುವ ಮಾವು ಸಿಗೋದು ತುಂಬ ವಿರಳ. ಆದರೆ ಬಳ್ಳಾರಿಯ ಶ್ರೀ ಕುಮಾರಸ್ವಾಮಿ ದೇವಾಲಯದಲ್ಲಿರುವ ಮಾವು ವಿಶೇಷ. ಹತ್ತು ವರುಷಗಳ ಹಿಂದೆ ನೆಟ್ಟ ಮಾವಿನ ಗಿಡ ಇದೀಗ ಬೆಳೆದು ವರ್ಷಪೂರ್ತಿ ಫಲ ಕೊಡುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos