ಡೇಂಗಿ ಜ್ವರಕ್ಕೆ ಯುವಕ ಬಲಿ

ಡೇಂಗಿ ಜ್ವರಕ್ಕೆ ಯುವಕ ಬಲಿ

ಮಂಗಳೂರು, ಆ. 10 : ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಭೀತಿ ಜೊತೆ ಸಾಂಕ್ರಾಮಿಕ ರೋಗದ ಜನ ಆತಂಕಕ್ಕೊಳಗಾಗಿದ್ದಾರೆ. ಉಪ್ಪಿನಂಗಡಿ ಸಮೀಪದ ತುರ್ಕಳಿಕೆ ನಿವಾಸಿ ದಿ. ಅಬೂಬಕ್ಕರ್ ಎಂಬವರ ಪುತ್ರ ಮಹಮ್ಮದ್ ನಿಝಾಮುದ್ದೀನ್ (25) ನಿಝಾಮುದ್ದೀನ್ 10 ದಿನಗಳಿಂದ ಡೆಂಘೀ ಜ್ವರದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದವರು ಚಿಕಿತ್ಸೆ ಫಲಕಾರಿ ಆಗದೆ ನಿಧನ ಹೊಂದಿದರು.
ನಿಝಾಮುದ್ದೀನ್ ವೃತ್ತಿಯಲ್ಲಿ ಪೈಂಟರ್ ಆಗಿದ್ದು, ಆಕರ್ಷಕ ಕ್ರಿಕೆಟ್ ವೀಕ್ಷಣೆ ವಿವರಣೆಗಾರನಾಗಿಯೂ ಚಿರಪರಿಚಿತರಾಗಿರುತ್ತಾರೆ. ಮೃತರು ತಾಯಿ ಮತ್ತು 3 ಮಂದಿ ಸಹೋದರರು, 3 ಮಂದಿ ಸಹೋದರಿಯರನ್ನು ಅಗಲಿದ್ದಾರೆ.
ಡೆಂಘೀ, ಚಿಕೂನ್ ಗುನ್ಯಾದಂತಹ ರೋಗಗಳು ಹರಡು ತ್ತಿದ್ದು ಜನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos