ಮಂಗಳೂರು: ವಿವಿಧ ಬೇಡಿಕೆಗಳು ಈಡೇರಿಕೆಗೆ ಬೀಡಿ ಕಾರ್ಮಿಕರ ಆಗ್ರಹ

ಮಂಗಳೂರು: ವಿವಿಧ ಬೇಡಿಕೆಗಳು ಈಡೇರಿಕೆಗೆ ಬೀಡಿ ಕಾರ್ಮಿಕರ ಆಗ್ರಹ

ಮಂಗಳೂರು, ನ್ಯೂಸ್‍ ಎಕ್ಸ್ ಪ್ರೆಸ್‍, ಫೆ.26: ಸಾವಿರ ಬೀಡಿಗೆ 210 ರೂ. ಕನಿಷ್ಠ ಕೂಲಿ ನೀಡಬೇಕು, 2015ರಿಂದ ಬಾಕಿ ಇರಿಸಿರುವ ತುಟ್ಟಿಭತ್ತೆಯನ್ನು ಪಾವತಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಸಿಐಟಿಯು ಅಧೀನದ ಸೌತ್ ಕೆನರಾ ಬೀಡಿ ವರ್ಕರ್ಸ್‌ ಫೆಡರೇಶನ್ ವತಿಯಿಂದ ಮಂಗಳವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂದೆ ಬೀಡಿ ಕಾರ್ಮಿಕರು ಧರಣಿ ನಡೆಸಿದರು.

ಈ ವೇಳೆ ಮಾತನಾಡಿದ
ಸೌತ್ ಕೆನರಾ ಬೀಡಿ ವರ್ಕರ್ಸ್‌
ಫೆಡರೇಶನ್‌ನ ರಾಜ್ಯಾಧ್ಯಕ್ಷ ಮತ್ತು
ದ.ಕ. ಜಿಲ್ಲಾ
ಕಾರ್ಯದರ್ಶಿ ಜೆ.ಬಾಲಕೃಷ್ಣ ಶೆಟ್ಟಿ,
ಕೇಂದ್ರ ಮತ್ತು ರಾಜ್ಯ ಸರಕಾರಗಳು
ಬೀಡಿ ಕಾರ್ಮಿಕರನ್ನು ನಿರ್ಲಕ್ಷಿಸುತ್ತಿದೆ. ಬೀಡಿ ಕಾರ್ಮಿಕರ ಬೇಡಿಕೆಗೆ
ಸ್ಪಂದಿಸುವ ಬದಲು ಬೀಡಿ ಕಂಪನಿಗಳ
ಮಾಲಕರ ಹಿತ ಕಾಪಾಡಲು ಮುಂದಾಗುತ್ತಿದೆ
ಆಕ್ರೋಶ ವ್ಯಕ್ತಪಡಿಸಿದರು.

ಸೌತ್ ಕೆನರಾ ಬೀಡಿ ವರ್ಕರ್ಸ್‌
ಫೆಡರೇಶನ್‌ನ ದ.ಕ.
ಜಿಲ್ಲಾಧ್ಯಕ್ಷ ವಸಂತ ಆಚಾರಿ, ಮುಖಂಡರಾದ
ಯು.ಬಿ.ಲೋಕಯ್ಯ, ಬಾಬು
ದೇವಾಡಿಗ, ಭಾರತಿ ಬೋಳಾರ, ಜಯಲಕ್ಷ್ಮೀ,
ಜಯಂತಿ ಬಿ.ಶೆಟ್ಟಿ, ಯು.ಜಯಂತ್ ನಾಯ್ಕಿ ಸೇರಿದಂತೆ
ನೂರಾರು ಕಾರ್ಮಿಕರು ಹಾಗೂ ಕಾರ್ಮಿಕ ಮುಖಂಡರು ಪಾಲ್ಗೊಂಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos