ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನ, ವಿದೇಶಿ ಕರೆನ್ಸಿ ಪತ್ತೆ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನ, ವಿದೇಶಿ ಕರೆನ್ಸಿ ಪತ್ತೆ

ಮಂಗಳೂರು, ಮಾ.6, ನ್ಯೂಸ್ಎಕ್ಸ್ ಪ್ರೆಸ್‍: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ಪ್ರಕರಣದಲ್ಲಿ ಭಾರಿ ಪ್ರಮಾಣದ ಚಿನ್ನ ಮತ್ತು ವಿದೇಶಿ ಕರೆನ್ಸಿಯನ್ನು ಕಸ್ಟಮ್ಸ್ ಏರ್ ಇಂಟೆಲಿಜೆನ್ಸ್ ವಿಭಾಗದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.

ದುಬೈನಿಂದ ಬರುತ್ತಿದ್ದ ಪ್ರಯಾಣಿಕನೊಬ್ಬನನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರಿಶೀಲಿಸಿದಾಗ ವಿದೇಶಿ ಮೂಲದ 24 ಕ್ಯಾರೆಟ್ ಶುದ್ಧತೆಯ 232.62 ಗ್ರಾಂ ಚಿನ್ನವನ್ನು ಬೆಳ್ಳಿ ಲೇಪನದ ವೃತ್ತಾಕಾರದ ಪ್ಲೇಟ್ ನಲ್ಲಿ ಟ್ರಾವೆಲ್ ಕುಕ್ಕರ್ ನ ಒಳಗೆ ಅಡಗಿಸಿ ತಂದಿರುವುದು ಪತ್ತೆಯಾಗಿದೆ.

ಮತ್ತೊಂದು ಪ್ರಕರಣದಲ್ಲಿ 24 ಕ್ಯಾರೆಟ್ ಶುದ್ಧತೆಯ ವಿದೇಶಿ ಮೂಲದ ಹುಡಿ ರೂಪದ 317. 360 ಗ್ರಾಂ ಚಿನ್ನವನ್ನು ಪ್ರಯಾಣಿಕನೋರ್ವ ಗುದದ್ವಾರದೊಳಗೆ ಇರಿಸಿಕೊಂಡು ಸಾಗಿಸುತ್ತಿದ್ದು, ಪತ್ತೆ ಮಾಡಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos