ಮಳೆಯಿಂದ ಮನೆಗೋಡೆ ಕುಸಿತ, ಸಿಗದ ಪರಿಹಾರ

ಮಳೆಯಿಂದ ಮನೆಗೋಡೆ ಕುಸಿತ, ಸಿಗದ ಪರಿಹಾರ

ಬೇಲೂರು, ನ. 16: ಇತ್ತೀಚಗೆ ಬಂದ ಅತ್ಯಧಿಕ ಮಳೆಯಿಂದ ಬಾಗಶಃ ಮನೆ ಕಳೆದುಕೊಂಡ ರೈತ ಬಿಕ್ಕೋಡು ಹೋಬಳಿ ಜೋಗಿಕೊಪ್ಪಲಿನ ಸೋಮಶೇಖರ್ ಅವರಿಗೆ ಇದುವರಗೆ ಸರಕಾರ ಹಾಗೂ ಗ್ರಾಮಪಂಚಾಯಿತಿಯಿಂದ ಪರಿಹಾರ ದೊರೆತಿಲ್ಲ.

ಗೋಡೆ ಕಟ್ಟಿಸಿಕೊಳ್ಳಲು ಆರ್ಥಿಕ ಸಾಮರ್ಥವಿಲ್ಲದ ಇವರು ಗೋಡೆಗೆ ಟಾರ್ಪಾಲ್ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. 3 ತಿಂಗಳ ಹಿಂದೆ ಬಂದ ಮಳೆಯಿಂದ ಸೋಮಶೇಖರ್ ಅವರ ಮನೆಯ ಗೋಡೆ ಬಿದ್ದುಹೋಗಿತ್ತು. ಆರ್ಥಿಕವಾಗಿ ಕುಗ್ಗಿರುವ ಸೋಮಶೇಖರ್ ಗೋಡೆ ನಿರ್ಮಿಸಿಕೊಳ್ಳಲಾಗದೆ ನೆರವಿಗಾಗಿ ಗ್ರಾ.ಪಂ.ಗೆ ಅರ್ಜಿ ನೀಡಿದರೂ ಪ್ರಯೋಜನವಾಗಿಲ್ಲ. ಮನೆ ಬಿದ್ದು 3 ತಿಂಗಳಾದರೂ ಬಿಕ್ಕೋಡು ನಾಡಕಚೇರಿಯ ಹಾಗೂ ಗ್ರಾ.ಪಂ.ಯಿಂದ ಯಾವುದೆ ವಿಧದ ನೆರವು, ಪರಿಹಾರ ದೊರೆತಿಲ್ಲ ಎಂದು ಸೋಮಶೇಖರ್ ಬೇಸರ ವ್ಯಕ್ತಪಡಿಸಿದರು.

ಮನೆಯ ಗೋಡೆಗಳು ಮಳೆಯಿಂದ ನೆನೆದು ಇಡಿ ಮನೆ ಪೂರ್ಣ ಪ್ರಮಾಣದಲ್ಲಿ ಬೀಳುವ ಸಂಭವವಿದೆ. ಗೋಡೆ ಬಿದ್ದಿರುವ ಸ್ಥಳಕ್ಕೆ ಟಾರ್ಪಾಲ್ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಮನೆಯಲ್ಲಿ ಮಕ್ಕಳು ಗಾಳಿ, ಚಳಿ, ಮಳೆಯ ನಡುವೆ ಮಲಗುತ್ತಿದ್ದಾರೆ. ಮಲಗಿದ್ದ ವೇಳೆ ಮನೆಯ ಗೋಡೆಗಳು ಬಿದ್ದರೆ ಅನಾಹುತ ಗ್ಯಾರಂಟಿ. ಬಿದ್ದಿರುವ ಗೋಡೆ ನಿರ್ಮಿಸಿಕೊಳ್ಳಲು ನನಗೆ ಸಹಾಯ ಬೇಕಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ ಎಂದು ಸೋಮಶೇಖರ್ ಮನವಿ ಮಾಡಿದರು.

 

ಫ್ರೆಶ್ ನ್ಯೂಸ್

Latest Posts

Featured Videos