ಮಂಡ್ಯದಲ್ಲಿ 4 ಸುಮಲತಾ, ಕಲಬುರಗಿಯಲ್ಲಿಯೂ 4 ಜಾಧವ್!

ಮಂಡ್ಯದಲ್ಲಿ 4 ಸುಮಲತಾ, ಕಲಬುರಗಿಯಲ್ಲಿಯೂ 4 ಜಾಧವ್!

ಕಲಬುರಗಿ, . 5, ನ್ಯೂಸ್ ಎಕ್ಸ್ ಪ್ರೆಸ್: ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತದಾರರಲ್ಲಿ ಗೊಂದಲ ಮೂಡಿಸಿ ಮತಗಳನ್ನು ವಿಭಜಿಸುವ ತಂತ್ರವನ್ನು ವಿರೋಧಿ ಅಭ್ಯರ್ಥಿಗಳು ಮಾಡುವುದು ಸಾಮಾನ್ಯ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ವಿರುದ್ಧ 3 ಜನರ ಸುಮಲತಾ  ಹೆಸರಿನಅವರು ಕಣಕ್ಕಿಳಿದಿದ್ದು, ಇದೇ ಮಾದರಿಯಲ್ಲಿ ಕಲಬುರಗಿಯಲ್ಲೂ ಕೂಡ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ವಿರುದ್ಧ ಜಾಧವ್ ಉಪನಾಮದ 3 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.

ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಉಮೇಶ್ ಜಾಧವ್ ನಡುವೆ ಜಿದ್ದಾಜಿದ್ದಿನ ನಡೆಯುತ್ತಿದ್ದು, ಪಕ್ಷೇತರರಾಗಿ ಶಂಕರ್ ಜಾಧವ್, ವಿಟ್ಠಲ್ ಜಾಧವ್ ಮತ್ತು ವಿಜಯ್ ಜಾಧವ್ ಅವರು ನಾಮಪತ್ರ ಸಲ್ಲಿಸಿದ್ದಾರೆ.

ಮೈತ್ರಿ ಧರ್ಮದ ಅನ್ವಯ ಜೆಡಿಎಸ್ ಕಲಬುರಗಿಯಲ್ಲಿ ಸ್ಪರ್ಧಿಸದೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಬಲಿಸಿದೆ. ಆದರೆ ವಿಟ್ಠಲ್ ಜಾಧವ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಹೇಳಿಕೊಂಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos