ಮಂಡ್ಯದಲ್ಲಿ ಸುಮಲತಾ ಹೆಸರಿನ ಒಬ್ಬ ಮಹಿಳೆ ನಾಮಪತ್ರ ವಾಪಸ್

ಮಂಡ್ಯದಲ್ಲಿ ಸುಮಲತಾ ಹೆಸರಿನ ಒಬ್ಬ ಮಹಿಳೆ ನಾಮಪತ್ರ ವಾಪಸ್

ಮಂಡ್ಯ, ಮಾ. 27, ನ್ಯೂಸ್ ಎಕ್ಸ್ ಪ್ರೆಸ್:  ಯಾರದೋ ಮಾತು ಕೇಳಿ ನನ್ನ ಹೆಂಡತಿ ನಾಮಪತ್ರ ಸಲ್ಲಿಸಿದ್ದಾಳೆ. ನಾಳೆ ನಾನೇ ನನ್ನ ಹೆಂಡತಿಯೊಂದಿಗೆ ಹೋಗಿ ನಾಮಪತ್ರ ವಾಪಸ್ಸು ಪಡೆಯುತ್ತೇನೆ ಎಂದು ಪಕ್ಷೇತರ ಅಭ್ಯರ್ಥಿ ಗೊರವಿ ಗ್ರಾಮದ ಸುಮಲತಾ ಪತಿ ಮಂಜೇಗೌಡ ಹೇಳಿದ್ದಾರೆ.

ನಗರದಲ್ಲಿ ಈ ಕುರಿತು ಮಾತನಾಡಿದ ಮಂಜೇಗೌಡ, ದರ್ಶನ್ ಅಭಿಮಾನಿಯಾಗಿ ನಾಮಪತ್ರ ವಾಪಸ್ಸು ಪಡೆಯುತ್ತೇನೆ. ನಾನು ದರ್ಶನ್ ಅಭಿಮಾನಿಯಾಗಿರೋ ಕಾರಣ ಸುಮಲತಾಕ್ಕರನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.

ನಿನ್ನೆಯಷ್ಟೆ 3 ಜನ ಸುಮಲತಾ ಹೆಸರಿನ ಮಹಿಳೆಯರು ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ ಕೆ.ಆರ್.ಪೇಟೆ ತಾಲೂಕಿನ ಗೊರವಿ ಗ್ರಾಮದ ಸುಮಲತಾ ಮಂಜೇಗೌಡ ಕೂಡ ಒಬ್ಬರು.

 

ಫ್ರೆಶ್ ನ್ಯೂಸ್

Latest Posts

Featured Videos