‘ಗೆಲುವಿನ ಬಗ್ಗೆ ಅತಿಯಾದ ಆತ್ಮವಿಶ್ವಾಸವಿಲ್ಲ’: ಸುಮಲತಾ

‘ಗೆಲುವಿನ ಬಗ್ಗೆ ಅತಿಯಾದ ಆತ್ಮವಿಶ್ವಾಸವಿಲ್ಲ’: ಸುಮಲತಾ

ಬೆಂಗಳೂರು, ಮೇ. 15, ನ್ಯೂಸ್ ಎಕ್ಸ್ ಪ್ರೆಸ್: ಈಗಾಗಲೇ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ದಿನಗಣನೆ ಪ್ರಾರಂಭವಾಗಿದೆ. ಆದರೆ ಮಂಡ್ಯ ಕ್ಷೇತ್ರದ ಅಖಾಡದ ಕಾವು ಮಾತ್ರ ಇನ್ನೂ ತಣ್ಣಗೆ ಆಗಿಲ್ಲ. ಇದೀಗ ಮಂಡ್ಯದ ಪಕ್ಷೇತರ ಅಭ್ಯರ್ಥಿಯಾದ ಸುಮಲತಾ ಕೂಡ ಸೋಲು ಗೆಲುವಿನ ಬಗ್ಗೆ ಮಾತನಾಡಿದ್ದಾರೆ.

‘ಸಮೀಕ್ಷೆಗಳ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ’

‘ಡಾಟರ್ ಅಫ್ ಪಾರ್ವತಮ್ಮ’ ಚಿತ್ರದ ಟ್ರೈಲರ್ ಮತ್ತು ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟಿ ಹಾಗೂ ಮಂಡ್ಯ ಲೋಕಸಭೆ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ,  ‘ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಾನೇ ಗೆಲ್ಲುತ್ತೇನೆ ಎನ್ನುವ ಅತಿಯಾದ ಆತ್ಮವಿಶ್ವಾಸವಿಲ್ಲ’.  ಇಷ್ಟೇ ಮತಗಳ ಅಂತರದಿಂದ ನಾನು ಜಯಗಳಿಸುತ್ತೇನೆ ಎಂದು ಹೇಳಲಾರೆ. ಸಮೀಕ್ಷೆಗಳ ಮೇಲೆ ನನಗೆ ಯಾವುದೇ ನಂಬಿಕೆ ಇಲ್ಲ. ನಾವು ಫಲಿತಾಂಶದ ಕುರಿತಾಗಿ ಯಾವ ಸಮೀಕ್ಷೆಗಳನ್ನು ಮಾಡಿಸಿಲ್ಲ. ಪ್ರತಿದಿನ ಒಂದಲ್ಲ ಒಂದು ಸಮೀಕ್ಷೆ ವರದಿ ಪ್ರಕಟವಾಗುತ್ತಿವೆ. ಅದರ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಮಂಡ್ಯ ಮತದಾರರ ಮೇಲೆ ವಿಶ್ವಾಸವಿದ್ದು, ತಮ್ಮ ಪರವಾಗಿ ಫಲಿತಾಂಶ ಬರುವ ನಿರೀಕ್ಷೆ ಇದೆ. ಯಾವುದೇ ಒತ್ತಡ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos