ಮಂಡ್ಯ ಚುನಾವಣೆಗೆ 150 ಕೋಟಿ! ತಪ್ಪೊಪ್ಪಿಕೊಂಡ ಜೆಡಿಎಸ್ ಮುಖಂಡರು!!

ಮಂಡ್ಯ ಚುನಾವಣೆಗೆ 150 ಕೋಟಿ! ತಪ್ಪೊಪ್ಪಿಕೊಂಡ ಜೆಡಿಎಸ್ ಮುಖಂಡರು!!

ಮಂಡ್ಯ, ಏ. 18, ನ್ಯೂಸ್ ಎಕ್ಸ್ ಪ್ರೆಸ್: ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿರುವ ಬೆನ್ನಲ್ಲೇ, ಇಬ್ಬರು ಜೆಡಿಎಸ್ ಮುಖಂಡರ ನಡುವೆ ನಡೆದ ಆಡಿಯೋ ಸಂಭಾಷಣೆ ಪ್ರಕರಣಕ್ಕೆ ಸಂಬಂಧಿಸಿದ ಸುದ್ದಿಯೊಂದು ಹೊರಬಿದ್ದಿದೆ. ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವಿಗೆ 150 ಕೋಟಿ ಖರ್ಚು ಮಾಡಲಾಗುತ್ತಿದೆ ಎನ್ನುವ ವೈರಲ್ ಆಡಿಯೋಗೆ ಸಂಬಂಧಿಸಿದಂತೆ, ಚುನಾವಣಾ ಆಯೋಗದ ಅಧಿಕಾರಿಗಳು ಇಬ್ಬರು ಮುಖಂಡರನ್ನು ತೀವ್ರ ವಿಚಾರಣೆಗೊಳಪಡಿಸಿದ್ದರು. ಮಂಡ್ಯ ರಾಜಕೀಯಕ್ಕೆ ಹೊಸ ತಿರುವು, ಮತ್ತೊಂದು ಆಡಿಯೋ ಸ್ಫೋಟ! ವಿಚಾರಣೆಯ ವೇಳೆ, ಆಡಿಯೋದಲ್ಲಿರುವ ಧ್ವನಿ ನಮ್ಮದೇ, ನಮ್ಮ ಸಂಭಾಷಣೆಯ ವೇಳೆ ಇತರ ಮುಖಂಡರೂ ನಮ್ಮ ಜೊತೆಗಿದ್ದರು ಎಂದು ಇಬ್ಬರು ಮುಖಂಡರು ತಪ್ಪೊಪ್ಪಿಕೊಂಡಿದ್ದಾರೆಂದು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಜಯಲಲಿತಾ ನಂತರ ಸುಮಲತಾ ಬಹುದೊಡ್ಡ ಮಾಯಾಂಗನೆ: ಶಿವರಾಮೇಗೌಡ ಮಂಡ್ಯದ ಹಾಲೀ ಜೆಡಿಎಸ್ ಸಂಸದ ಶಿವರಾಮೇಗೌಡರ ಪುತ್ರ ಚೇತನ್ ಗೌಡ ಮತ್ತು ಜೆಡಿಎಸ್ ಮುಖಂಡ ಪಿ ರಮೇಶ್ ನಡುವೆ ನಡೆದ ಮಾತುಕತೆ ಇದಾಗಿತ್ತು. ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ನೂರೈವತ್ತು ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ಈ ಇಬ್ಬರು ನಡೆಸಿದ ದೂರವಾಣಿ ಮಾತುಕತೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos