ಹನುಮ ಧ್ವಜ: ಫ್ರೆ 9 ರಂದು ಮಂಡ್ಯ ಬಂದ್!

ಹನುಮ ಧ್ವಜ: ಫ್ರೆ 9 ರಂದು ಮಂಡ್ಯ ಬಂದ್!

ಮಂಡ್ಯ: ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ಪ್ರಕರಣ ಹನುಮ ಧ್ವಜ ಪ್ರಕರಣ ರಾಜಕೀಯವಾಗಿ ಬಳಸಿಕೊಳ್ಳಲು ಪ್ಲಾನ್ ಮಾಡಲಾಗುತ್ತಿದೆ, ಮತ್ತೊಂದು ಸೊತ್ತಿನ ಹೋರಾಟಕ್ಕೆ ಸಾಕ್ಷಿ ಆಗಲಿದೆ. ಕೆಳಗೋಡು ದೋಸ್ತಿಗಳಿಂದ ಸರ್ಕಾರದ ವಿರುದ್ಧ ಈ ಒಂದು ಪ್ರತಿಭಟನೆ ನಡೆಯುತ್ತಿದೆ.

ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಆಂಜನೇಯ ದೇಗುಲದ ಎದುರು ಹನುಮ ಧ್ವಜವನ್ನು ಸ್ಥಳೀಯರು ಹಾಗೂ ಬಿಜೆಪಿ ಮುಖಂಡರು ಕಟ್ಟಿದ್ದರು. ಇದಕ್ಕೆ ಸ್ಥಳೀಯವಾಗಿ ಅನುಮತಿಯನ್ನೂ ಪಡೆಯಲಾಗಿತ್ತು. ಎರಡು ದಿನದ ಹಿಂದೆ ಏಕಾಏಕಿ ಹನುಮಧ್ವಜವನ್ನು ತೆರವುಗೊಳಿಸಲಾಗಿತ್ತು. ಇದಕ್ಕೆ ಅನುಮತಿ ನೀಡಿಲ್ಲ ಎಂದು ಕೆಲವರು ತೆರವುಗೊಳಿಸಿದ್ದರು. ಮಂಡ್ಯ ಶಾಸಕ ಗಣಿಗ ರವಿಕುಮಾರ್‌ ಅವರ ಕುಮ್ಮಕ್ಕಿನಿಂದಲೇ ಹನುಮ ಧ್ವಜವನ್ನು ತೆರವುಗೊಳಿಸಲಾಗಿದೆ ಎನ್ನುವುದು ಬಿಜೆಪಿ ಹಾಗೂ ಜೆಡಿಎಸ್‌ ಆರೋಪ. ಈ ವಿಚಾರವಾಗಿ ಸಂಘರ್ಷ ಏರ್ಪಟ್ಟಿದ್ದು, ಪ್ರತಿಭಟನೆಗಳು ನಡೆದಿವೆ.

ಹನುಮ ಧ್ವಜ ತೆರವು ವಿರೋಧಿಸಿ ಬಿಜೆಪಿ, ಜೆಡಿಎಸ್‌, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕೆರಗೋಡಿನಿಂದ ಮಂಡ್ಯ ಡಿಸಿ ಕಚೇರಿವರೆಗೂ ಬೃಹತ್‌ ಪಾದಯಾತ್ರೆ ಕೈಗೊಂಡಿದ್ದಾರೆ. ಸುಮಾರು 15 ಕಿ.ಮಿ ವ್ಯಾಪ್ತಿಯ ಪಾದಯಾತ್ರೆ ಜೋರಾಗಿಯೇ ಇತ್ತು. ಮರಿಲಿಂಗನದೊಡ್ಡಿ, ಹುಲಿವಾನ, ಸಾತನೂರು, ಚಿಕ್ಕಮಂಡ್ಯ ಮಾರ್ಗವಾಗಿ ಮಂಡ್ಯವರೆಗೂ ಪಾದಯಾತ್ರೆ ನಡೆಯಿತು. ಭಾರೀ ಘೋಷಣೆಗಳ, ಕೇಸರಿ ಬಣ್ಣದ ಬ್ಯಾನರ್‌, ಬಂಟಿಂಗ್‌ಗಳು ರಾರಾಜಿಸಿದರು. ಎಲ್ಲೆಡೆ ಜೈ ಶ್ರೀರಾಮ್‌ ಘೋಷಣೆ ಜೋರಾಗಿಯೇ ಇತ್ತು. ಪಾನಕ, ಮಜ್ಜಿಗೆ ವಿತರಣೆಯೂ ಮಾರ್ಗದುದ್ದಕ್ಕೂ ನಡೆಯಿತು. ರಾಮ ಹಾಗೂ ಹನುಮರ ಭಾವಚಿತ್ರಕ್ಕೆ ಪೂಜೆಗಳು ನಡೆದವು.

ಈ ವೇಳೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್‌ ಸರ್ಕಾರವು ಜನರ ಜತೆಗೆ ಚೆಲ್ಲಾಟವಾಡುತ್ತಿದೆ. ಹಳ್ಳಿಗಳಲ್ಲಿ ತಮ್ಮ ಪಾಡಿಗೆ ಹನುಮಧ್ವಜ ಹಾಕಿದರೂ ಅದನ್ನು ತೆರವುಗೊಳಿಸಿ ರಾಜಕೀಯ ಮಾಡಲಾಗುತ್ತಿದೆ ಎಂದು ಆಪಾದಿಸಿದರು.

‌ಈ ನಡುವೆ ಕೆರಗೋಡು ಹನುಮಧ್ವಜದ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಬಿಜೆಪಿ, ಜೆಡಿಎಸ್‌ ಮುಂದಾಗಿವೆ. ಇದಕ್ಕಾಗಿ ಫೆಬ್ರವರಿ 9ರ ಶುಕ್ರವಾರದಂದು ಮಂಡ್ಯ ಬಂದ್‌ಗೆ ಕರೆ ನೀಡಲಾಗಿದೆ. ಅಂದು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ನೀಡಲು ಬಿಜೆಪಿ ಹಾಗೂ ಜೆಡಿಎಸ್‌ ಯೋಜನೆ ರೂಪಿಸುತ್ತಿವೆ.

 

ಫ್ರೆಶ್ ನ್ಯೂಸ್

Latest Posts

Featured Videos