ಇಂದು ನೆಲ್ಸನ್‌ ಮಂಡೇಲ  100ನೇ  ಜನ್ಮದಿನ

ಇಂದು ನೆಲ್ಸನ್‌ ಮಂಡೇಲ   100ನೇ  ಜನ್ಮದಿನ

ದಕ್ಷಿಣ ಆಪ್ರೀಕಾ :  ನೆಲ್ಸನ್‌ ಮಂಡೇಲ ಜುಲೈ 18, 1918ರಲ್ಲಿ ದಕ್ಷಿಣ ಆಫ್ರಿಕಾದ ಟ್ರಾನ್‌ ಸ್ಕೈನಲ್ಲಿ ಜನಿಸಿದರು. ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿ ವಿರುದ್ಧ ಹೋರಾಡಿ ಕಪ್ಪು ಜನಾಂಗದವರನ್ನು ಮುಖ್ಯವಾಹಿನಿಗೆ ತಂದು ಜೈಲುವಾಸ ಅನುಭವಿಸಿದರು. ಕಪ್ಪು ಜನಾಂಗದ ಮೊದಲ ಅಧ್ಯಕ್ಷ ನೊಬೆಲ್‌ ಶಾಂತಿ ಪ್ರಶಸ್ತಿ ಪಡೆದ ನೆಲ್ಸನ್‌ ಮಂಡೇಲ ಜನಾಂಗದವರ ಪಾಲಿನ ಪಿತಾಮಹ. ಕಪ್ಪುಜನರ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅವರಿಗೆ 250ಕ್ಕೂ ಹೆಚ್ಚು ಪ್ರಶಸ್ತಿಗಳು ದೊರತಿವೆ. ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವರ ವರ್ಣಭೇದ ನೀತಿ ವಿರುದ್ಧ ಹೋರಾಟವನ್ನು ಗುರುತಿಸಿ 1990ರಲ್ಲಿ ಭಾರತ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿತು. 2009ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನೆಲ್ಸನ್‌ ಮಂಡೇಲ ಅವರು ಹುಟ್ಟಿದ ದಿನವಾದ ಜುಲೈ 18  ನೆಲ್ಸನ್‌ ಮಂಡೇಲ ಇಂಟರ್‌ ನ್ಯಾಷನಲ್‌ ‘ಡೇ’ ಆಚರಿಸಬೇಕೆಂದು ಘೋಷಿಸಲಾಯಿತು. 2010 ಜುಲೈ 18ರಂದು ವಿಶ್ವಸಂಸ್ಥೆ ಮೊದಲ ಬಾರಿಗೆ ಈ ದಿನವನ್ನು ಆಚರಿಸಿತು.   ಕಾನೂನು ಪದವಿ ಪಡೆದ ಇವರು ವರ್ಣಬೇಧ ನೀತಿಗಳ ವಿರುದ್ಧ ಹೋರಾಡಿದರು. ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮ ಗಾಂಧೀಜಿ ಆರಂಭಿಸಿದ ವರ್ಣಭೇದ ನೀತಿಯ ವಿರುದ್ಧದ ಹೋರಾಟವನ್ನು ನಾಲ್ಕು ದಶಕಗಳ ನಂತರ ಮುಂದುವರಿಸಿದ ಕೀರ್ತಿ ನೆಲ್ಸನ್ ಮಂಡೇಲಾ ಅವರದ್ದು. ಶಾಂತಿ ನೊಬೆಲ್ ಪುರಸ್ಕೃತ ದಕ್ಷಿಣ ಆಫ್ರಿಕಾದ ಕಪ್ಪು ಜನಾಂಗಕ್ಕೆ ಸೇರಿದ ಮೊದಲ ಅಧ್ಯಕ್ಷ ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ.

ದಕ್ಷಿಣ ಆಫ್ರಿಕಾದ ಗಾಂಧಿ ಎಂದೇ ಪ್ರಸಿದ್ಧರಾಗಿದ್ದ ನೆಲ್ಸನ್‌ ಮಂಡೇಲ ಅವರ 100ನೇ ವರ್ಷದ ಜನ್ಮದಿನವನ್ನು ಇಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಶಾಂತಿ, ವರ್ಣಭೇದ ನೀತಿ, ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಸಮಾನತೆ, ವೈವಿಧ್ಯತೆ, ಸಾಮರಸ್ಯಕ್ಕೆ ಮಂಡೇಲ ಅವರು ನೀಡಿದ ಕೊಡುಗೆಯನ್ನು ನೆನಪಿಸುವುದು ಮಂಡೇಲ ಅವರು 2013 ಡಿಸೆಂಬರ್‌ 5 ರಂದು ನಿಧನರಾದರು.

ಫ್ರೆಶ್ ನ್ಯೂಸ್

Latest Posts

Featured Videos