ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವೋಲ್ವೋ ಬಸ್ ಸಂಚಾರ

ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವೋಲ್ವೋ ಬಸ್ ಸಂಚಾರ

ಮೈಸೂರು, ಜು.29: ನಗರದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆ. 15ರಿಂದ ಕೆಎಸ್ಆರ್ಟಿಸಿ ವೋಲ್ವೋ ಬಸ್ ಸೇವೆಯನ್ನು ವಿವಿಧ ಭಾಗಗಳಿಂದ ಆರಂಭಿಸಲಾಗುತ್ತದೆ. ಪ್ರತಿನಿತ್ಯ ಮಂಡಕಳ್ಳಿ ವಿಮಾನ ನಿಲ್ದಾಣ ದಲ್ಲಿ ಹಲವು ವಿಮಾನಗಳ ಹಾರಾಟ ಆರಂಭವಾಗಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಆರ್ ಟಿಸಿ ಸಂಸ್ಥೆ ಈ ನೂತನ ನೀತಿ ಆರಂಭಿಸುತ್ತಿದೆ.
ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ನಗರದ ವಿವಿಧ ಬಡಾವಣೆಗಳು ಸೇರಿದಂತೆ ಹೆಬ್ಬಾಳ ಇನ್ಫೋಸಿಸ್, ವಿಪ್ರೋ ಸೇರಿದಂತೆ ಐಟಿ-ಬಿಟಿ ಕಂಪನಿಗಳು ಹೆಚ್ಚಾಗಿದ್ದ ಈ ಪ್ರದೇಶದಿಂದ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ.
ಹೀಗಾಗಿ ಹೆಬ್ಬಾಳು ಕೈಗಾರಿಕಾ ಪ್ರದೇಶದಿಂದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವೋಲ್ವೋ ಬಸ್ ಸಂಚರಿಸಲಿದೆ. ಈ ಬಸ್ನಲ್ಲಿ ಪ್ರಯಾಣಿಕರೊಬ್ಬರಿಗೆ 150 ರೂ.ಗಳನ್ನು ನಿಗದಿ ಮಾಡಲಾಗಿದ್ದು, ಪ್ರಯಾಣಿಕರು ಮಾರ್ಗ ಮಧ್ಯೆ ಎಲ್ಲಾದರು ಇಳಿದರೆ 100ರೂ. ಪಾವತಿಸ ಬೇಕಾಗುತ್ತದೆ ಕೆಎಸ್ಆರ್ ಟಿಸಿ ಸಂಸ್ಥೆ ತಿಳಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos