ಮಾನವನ ಹೋಲಿಕೆ ಮೇಕೆ ಮರಿ ಸಾವು

  ಮಾನವನ ಹೋಲಿಕೆ ಮೇಕೆ ಮರಿ ಸಾವು

 ತುಮಕೂರು. ಜು. 27 : ಮಾನವನ ಕೈ, ಕಾಲು ಮತ್ತು ಮೂತಿಯನ್ನು ಹೋಲುವ ವಿಚಿತ್ರ ಮೇಕೆ  ಮರಿಯೊಂದು ಕೊಡಿಗೇನಹಳ್ಳಿ ಹೊಬಳಿಯ ಚಿಕ್ಕಮಾಲೂರು ಗ್ರಾಪಂ ವ್ಯಾಪ್ತಿಯ ಕಾಳೇನಹಳ್ಳಿ ಗ್ರಾಮದಲ್ಲಿ ಜನಸಿದ್ದು, ಕೆಲವೇ ಹೊತ್ತಿನಲ್ಲಿ ಸಾವನ್ನಪ್ಪಿದೆ. ಮೇಕೆ ಹುಟ್ಟಿದ ಒಂದೆರಡು ನಿಮಿಷದಲ್ಲೇ ಅಸುನೀಗಿದ್ದು, ವಿದ್ಯಮಾನ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ. ಮನುಷ್ಯನಂತೆ ಕೈ ಕಾಲು ಹಾಗೂ ಮೂತಿ  ಮೇಕೆ ಮರಿಯನ್ನು ಗ್ರಾಮಸ್ಥರು ಮನುಷ್ಯನಿಗೆ ಹೋಲಿಸಿದ್ದಾರೆ.
ಈ ಸಂಬಂಧ ಮನುಷ್ಯ ಸತ್ತಾಗ ಆಚರಿಸುವ ವಿಧಿವಿಧಾನಗಳನ್ನು ಅನುಸರಿಸಿ, ಮೇಕೆ ಮರಿಯ ಅಂತ್ಯಕ್ರಿಯೆ ಮಾಡಲಾಗಿದೆ.  ಜಾನಕಿ ರಾಮಯ್ಯ ಎಂಬವರಿಗೆ ಸೇರಿದ ಮೇಕೆ, 1 ಗಂಡು ಹಾಗೂ ಮತ್ತೊಂದು ಅಸಹಜ ಮೇಕೆ ಮರಿಗೆ ಜನ್ಮ ನೀಡಿತ್ತು.

ಫ್ರೆಶ್ ನ್ಯೂಸ್

Latest Posts

Featured Videos