ಮೋದಿಯಂತೆ ನಾನು ಮಾಧ್ಯಮಗಳ ಮುಂದೆ ಮಾತನಾಡಲು ಹೆದರುತ್ತಿರಲಿಲ್ಲ: ಮನಮೋಹನ್‌ಸಿಂಗ್

ಮೋದಿಯಂತೆ ನಾನು ಮಾಧ್ಯಮಗಳ ಮುಂದೆ ಮಾತನಾಡಲು ಹೆದರುತ್ತಿರಲಿಲ್ಲ: ಮನಮೋಹನ್‌ಸಿಂಗ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಾಧ್ಯಮಗಳನ್ನು ಮಣಿಸಲು ಮುಂದಾಗಿದ್ದಾರೆ ಎಂದು ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಆಪಾದಿಸಿದ್ದಾರೆ. “ನನ್ನನ್ನು ಮೌನ ಪ್ರಧಾನಿ ಎಂದು ಪತ್ರಿಕೆಗಳು ಬಣ್ಣಿಸಿದ್ದವು. ಆದರೂ ನನಗೆ ಪತ್ರಿಕೆಗಳ ಜೊತೆಗೆ ಮಾತನಾಡಲು ಹೆದರುತ್ತಿರಲಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಮೋದಿ ವಿರೋಧ ಪಕ್ಷದಲ್ಲಿದ್ದಾಗ ಅಂದಿನ ಪ್ರಧಾನಿಯಯನ್ನು ಮೌನಮೋಹನ ಎಂದು ಟೀಕಿಸಿದ್ದರು. ಆದರೆ ಈಗ ಮಾಧ್ಯಮಗಳಿಗೆ ಪ್ರಶ್ನೆಗಳನ್ನು ಕೇಳಲು ಅವಕಾಶ ನೀಡದಿರುವ ಬಗ್ಗೆ ವೀಕ್ಷಕರು ಮೋದಿಯನ್ನು ಲೇವಡಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿಯ ಈ ಹೇಳಿಕೆ ವಿಶೇಷ ಮಹತ್ವ ಪಡೆದಿದೆ.

ತಮ್ಮ ಐದು ಸಂಪುಟಗಳ “ಚೇಂಜಿಂಗ್ ಇಂಡಿಯಾ” ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಪ್ರಧಾನಿ ಆಗಿರಲಿಲ್ಲ. ನಾನು ಮಾಧ್ಯಮಗಳನ್ನು ನಿಯತವಾಗಿ ಭೇಟಿಯಾಗುತ್ತಿದ್ದೆ. ಪ್ರತೀ ವಿದೇಶ ಪ್ರವಾಸ ಕೈಗೊಂಡಾಗಲೂ ವಾಪಾಸ್ಸಾದ ಬಳಿಕ ಪತ್ರಿಕಾಗೋಷ್ಠಿ ನಡೆಸುತ್ತಿದ್ದೆ.
ಇಂಥ ಗೋಷ್ಠಿಗಳ ವಿವರಗಳೂ ಈ ಪುಸ್ತಕದಲ್ಲಿವೆ ಈ ಐದು ಸಂಪುಟಗಳೇ ಮಾತನಾಡುತ್ತವೆ. ಪ್ರಧಾನಿಯಾಗಿ ನನ್ನ ಸಾಧನೆಗಳನ್ನು ಹೇಳಿಕೊಂಡಿಲ್ಲ. ಈ ಸಂಪುಟಗಳಲ್ಲಿ ಎಲ್ಲ ಘಟನಾವಳಿಗಳಲ್ಲಿ ವಿವರಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos