ಮೆಟ್ರೋದಲ್ಲಿ ಗೋಬಿ ಸವಿದ ವ್ಯಕ್ತಿಗೆ ದಂಡ!

ಮೆಟ್ರೋದಲ್ಲಿ ಗೋಬಿ ಸವಿದ ವ್ಯಕ್ತಿಗೆ ದಂಡ!

ಬೆಂಗಳೂರು: ನಮ್ಮ ಬೆಂಗಳೂರಿನಲ್ಲಿ ಎಲ್ಲರೂ ಸಹ ಅವಲಂಬಿತರಾಗಿರೋದೆಂದರೆ ಅದು ನಮ್ಮ ಮೆಟ್ರೋ. ಏಕೆಂದರೆ ಬೆಂಗಳೂರಿನಲ್ಲಿ ನಾವು ಎಲ್ಲಿಗಾದರೂ ಬಸ್ಸಿನಲ್ಲಿ ಹೋಗಬೇಕಾದರೆ ಆ ಟ್ರಾಫಿಕ್ ಜಾಮ್ ನಲ್ಲಿ ನಾವು ಸರಿಯಾದ ಸಮಯಕ್ಕೆ ಹೋಗಲು ಸಾಧ್ಯವಾಗುವುದಿಲ್ಲ ಅದರಿಂದ ಎಲ್ಲರೂ ಸಹ ನಮ್ಮ ಮೆಟ್ರೋಗೆ ಅವಲಂಬಿತರಾಗಿದ್ದಾರೆ. ಇದರಿಂದ ನಮ್ಮ ಸಮಯವೂ ಸಹ ಉಳಿತಾಯವಾಗುತ್ತದೆ ಹಾಗೂ ನಾವು ಸರಿಯಾದ ಸಮಯಕ್ಕೆ ಆಫೀಸ್ ಗಳಿಗೆ ಹಾಗೂ ಶಾಲಾ ಕಾಲೇಜುಗಳಿಗೆ ಹೋಗಬಹುದು.
ಸುನೀಲ್ ಕುಮಾರ್ ಮತ್ತು ಅವರ ಸ್ನೇಹಿತರು ಜಯನಗರದ ಪ್ರಮುಖ ಆಭರಣ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದು, ಪ್ರತೀನಿತ್ಯ ಕೆಲಸಕ್ಕೆ ತೆರಳಲು ಸಂಪಿಗೆ ರಸ್ತೆ ನಿಲ್ದಾಣದಲ್ಲಿ ಮೆಟ್ರೋ ಹತ್ತಿದ್ದರು. ಮಂಗಳವಾರ ಕೂಡ ಮೆಟ್ರೋ ರೈಲು ಹತ್ತಿದ್ದು, ಈ ವೇಳೆ ಸುನೀಲ್ ಅವರು ಮೆಟ್ರೋ ರೈಲಿನಲ್ಲಿ ಗೋಬಿ ಸವಿದಿದ್ದಾರೆ. ಇದರ ವಿಡಿಯೋವನ್ನು ಸ್ನೇಹಿತರು ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಈ ನಡುವೆ ನಿಯಮ ಉಲ್ಲಂಘಿಸಿದ ಯೂಟ್ಯೂಬರ್ ಗೆ ನಮ್ಮ ಮೆಟ್ರೋ ರೂ.500 ದಂಡ ವಿಧಿಸಿದೆ. ಅಲ್ಲದೆ, ಸುನೀಲ್ ಹಾಗೂ ಅವರ ಸ್ನೇಹಿತರ ವಿರುದ್ಧ ಸಿಎಆರ್ (ನಾನ್-ಕಾಗ್ನಿಜಬಲ್ ವರದಿ) ದಾಖಲಿಸಲಾಗಿದೆ, ಎಚ್ಚರಿಕೆ ನೀಡಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಎಂಆರ್‌ಸಿಎಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣೆಯ ಕಾರ್ಯನಿರ್ವಾಹಕ ನಿರ್ದೇಶಕ ಎ ಎಸ್. ಶಂಕರ್ ಅವರು ಮಾತನಾಡಿ, ಎಲ್ಲಾ ಪ್ರಯಾಣಿಕರು ನಿಯಮಗಳನ್ನು ಪಾಲನೆ ಮಾಡುತ್ತಿದ್ದಾರೆ. ವಿಡಿಯೋವನ್ನು ಗಮನಿಸಿದ ಭದ್ರತಾ ಸಿಬ್ಬಂದಿಗಳು ಅವರ ಬಂಧನಕ್ಕಾಗಿ ಜಯನಗರದಲ್ಲಿ ಕಾಯುತ್ತಿದ್ದರು. ಮೂವರು ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಅರ್ಧ ದಿನ ಮೂವರನ್ನು ಠಾಣೆಯಲ್ಲಿರಿಸಲಾಗಿತ್ತು ಎಂದು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos