ಕೇಂದ್ರ ವಿರುದ್ಧ ಮಮತಾ ಗಂಭೀರ ಆರೋಪ

ಕೇಂದ್ರ ವಿರುದ್ಧ ಮಮತಾ ಗಂಭೀರ ಆರೋಪ

ಕೋಲ್ಕತ್ತಾ, ನ. 4 : ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಟೆಲಿಪೋನ್ ಕದ್ದಾಲಿಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಗಂಬೀರ ಆರೋಪ ಮಾಡಿದ್ದಾರೆ.
ಟೆಲಿಫೋನ್ ಕದ್ದಾಲಿಕೆ ಸಂಬಂಧಿಸಿ ವಿಚಾರಕ್ಕೆ ಕೇಂದ್ರದ ವಿರುದ್ಧಾ ಆರೋಪ ಮಾಡಿ, ಕೇಂದ್ರ ಸರ್ಕಾರ ತಮ್ಮ ಟೆಲಿಫೋನ್ನನ್ನು ಕದ್ದಾಲಿಕೆ ಮಾಡಿದ್ದು ಇದಕ್ಕೆ ತಮ್ಮಲ್ಲಿ ಸಾಕ್ಷಿಗಳಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಜಾಗ್ರತೆ ವಹಿಸಲಿ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಸದ್ಯ ಫೋನ್ ಕದ್ದಾಲಿಕೆ(ಫೋನ್ ಟ್ಯಾಪಿಂಗ್) ಕುರಿತ ಆರೋಪ ಪ್ರತ್ಯಾರೋಪ ಹೆಚ್ಚಾಗಿದ್ದು, ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಮಾಡಿರುವ ಹೊಸ ಆರೋಪ ಭಾರೀ ವಿವಾದ ಸೃಷ್ಟಿಸಿ ಹಿನ್ನಲೆ ಕೇಂದ್ರ ಸರ್ಕಾರದ ಕಳ್ಳಗಿವಿ (ಫೋನ್ ಟ್ಯಾಪಿಂಗ್)ಬಗ್ಗೆ ಆರೋಪಗಳು ಮಾಡಿ, ಇಸ್ರೇಲ್ ದೇಶದ ಸಂಸ್ಥೆ ಸರ್ಕಾರಕ್ಕೆ ಸೋಷಿಯಲ್ ಮೀಡಿಯಾ ಆಪ್ ವಾಟ್ಸಾಪ್ನ ಗೂಢಚರ್ಯೆ ಮಾಡಲು ಯಂತ್ರಗಳ ಪೂರೈಕೆ ಮಾಡಿರುವುದು ಸುಳ್ಳಲ್ಲ. ನನ್ನ ಟೆಲಿಫೋನ್ನನ್ನು ಕದ್ದಾಲಿಕೆ ಮಾಡಲಾಗಿದೆ. ನನ್ನಲ್ಲಿ ಈ ಬಗ್ಗೆ ಸಾಕ್ಷಿಗಳಿರುವುದರಿಂದ ನನಗೆ ಇದು ಗೊತ್ತಿದೆ ಎಂದರು.
ಭಾರತದಲ್ಲಿ ಬಳಕೆದಾರರ ಖಾಸಗಿತನವನ್ನು ವಾಟ್ಸಾಪ್ ಸಂಸ್ಥೆ ಉಲ್ಲಂಘಿಸಿದೆ ಎಂದು ನಿನ್ನೆ ಬಂದಿರುವ ಸುದ್ದಿಗೆ ಪ್ರತಿಕ್ರಿಯೆಯಾಗಿ ಅವರು ಈ ಮಾತನ್ನು ಹೇಳಿದ್ದು ಕೇಂದ್ರ ಸರ್ಕಾರ ದೇಶದ ರಾಜಕೀಯ ನಾಯಕರು, ಪತ್ರಕರ್ತರು, ವಕೀಲರು, ಸಾಮಾಜಿಕ ಕಾರ್ಯಕರ್ತರು ಮತ್ತು ಇತರ ಪ್ರಮುಖ ವ್ಯಕ್ತಿಗಳ ಮೇಲೆ ಗೂಢಚರ್ಯೆ ನಡೆಸುತ್ತಿದೆ ಎಂದು ಆರೋಪಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos