ಮಲ್ಯನ ಖಾತೆಯಲ್ಲಿರುವ ಹಣ ಪಡೆಯಲು ಎಸ್.ಬಿ.ಐ. ಕಾನೂನು ಸಮರ

ಮಲ್ಯನ ಖಾತೆಯಲ್ಲಿರುವ ಹಣ ಪಡೆಯಲು ಎಸ್.ಬಿ.ಐ. ಕಾನೂನು ಸಮರ

ಬೆಂಗಳೂರು, ಏ. 4, ನ್ಯೂಸ್ ಎಕ್ಸ್ ಪ್ರೆಸ್: ಸಾವಿರಾರು ಕೋಟಿ ವಂಚಿಸಿ ಇಂಗ್ಲೆಂಡ್​ನಲ್ಲಿ ತಲೆ ಮರಿಸಿಕೊಂಡಿರುವ ಮದ್ಯದ ಉದ್ಯಮಿ ವಿಜಯ್ ಮಲ್ಯ ವಿರುದ್ಧ ಎಸ್​ಬಿಐ ನೇತೃತ್ವದಲ್ಲಿ ಭಾರತೀಯ ಬ್ಯಾಂಕ್​ಗಳ ಒಕ್ಕೂಟ ಸಾಲ ಮರುಪಾವತಿಗೆ ಮತ್ತೊಂದು ಸುತ್ತಿನ ಕಾನೂನು ಸಮರ ಸಾರಿವೆ. ಇಂಗ್ಲೆಂಡ್​ ಬ್ಯಾಂಕ್​ ಖಾತೆಯಲ್ಲಿರುವ ಮಲ್ಯನಿಗೆ ಸಂಬಂಧಿಸಿದ 2.60 ಲಕ್ಷ ಪೌಂಡ್​ (ರೂ. 2.34 ಕೋಟಿ) ಪಡೆದ ಸಾಲಕ್ಕೆ ಪ್ರತಿಯಾಗಿ ತಮಗೆ ನೀಡುವಂತೆ ಇಲ್ಲಿನ ಸ್ಥಳೀಯ ಕೋರ್ಟ್​ಗೆ ಮನವಿ ಮಾಡಿವೆ. ಭಾರತೀಯ ಬ್ಯಾಂಕುಗಳು ಈ ವರ್ಷದ ಜನವರಿಯಲ್ಲಿ ಮಧ್ಯಂತರ ಸಾಲ ಆದೇಶ ಪಡೆದಿವೆ. ಈ ಹಣ ಹಿಂದೆ ಕಿಂಗ್​ಫಿಶರ್​ ಏರ್​ಲೈನ್ಸ್ ಮುಖ್ಯಸ್ಥರಾಗಿದ್ದಾಗ ಸಂಬಂಧಿಸಿದ್ದು, ಪ್ರಸ್ತುತ ಲಂಡನ್​ನಲ್ಲಿರುವ ಐಸಿಐಸಿಐ ಬ್ಯಾಂಕ್​ ಖಾತೆಯಲ್ಲಿ ಮಲ್ಯ ಇರಿಸಿದ್ದಾರೆ. ನ್ಯಾಯಾಲಯದ ಕ್ವೀನ್ಸ್ ಬೆಂಚ್ ವಿಭಾಗದ ಮಾಸ್ಟರ್ ಡೇವಿಡ್ ಕುಕ್ ಅವರು ಮೊದಲ ವಿಚಾರಣೆಯಲ್ಲಿ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಮಧ್ಯಂತರ ಆದೇಶದಲ್ಲಿ ವಜಾಗೊಳಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ಮುಂದಿನ ದಿನಗಳಲ್ಲಿ ಬರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಜನವರಿ ತಿಂಗಳಲ್ಲಿ ಬ್ಯಾಂಕ್​ಗಳು ಪಡೆದ ಕೋರ್ಟ್​ನ ಮಧ್ಯಂತರ ಆದೇಶದ ಅನ್ವಯ, ಮಲ್ಯ ಲಂಡನ್​ನಲ್ಲಿರುವ ಐಸಿಐಸಿಐ ಖಾತೆಯಲ್ಲಿ 260,000 ಪೌಂಡ್​ಗಳಷ್ಟು ಹಣವಿದೆ ಎಂದು ಟಿಎಲ್​ಟಿ ಎಲ್ಎಲ್​ಪಿ ವಕ್ತಾರ ಭಾರತೀಯ ಬ್ಯಾಂಕ್​ಗಳಿಗೆ ಮಾಹಿತಿ ನೀಡಿದ್ದಾರೆ. ಎಸ್​ಬಿಐ ಸೇರೆ ಇತರೆ 12 ಭಾರತೀಯ ಬ್ಯಾಂಕ್​ಗಳಾದ ಬ್ಯಾಂಕ್ ಆಫ್ ಬರೋಡಾ, ಕಾರ್ಪೊರೇಷನ್ ಬ್ಯಾಂಕ್, ಫೆಡರಲ್ ಬ್ಯಾಂಕ್ ಲಿಮಿಟೆಡ್, ಐಡಿಬಿಐ ಬ್ಯಾಂಕ್, ಇಂಡಿಯನ್ ಓವರ್​ ಸೀಸ್​ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಯುಕೋ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಜೆಎಂ ಫೈನಾನ್ಸಿಯಲ್ ಅಸೆಟ್ ರೀಕನ್​ಸ್ಟ್ರಕ್ಷನ್​ ಕೋ- ಪ್ರೈವೇಟ್ ಲಿಮಿಟೆಡ್ ಇಂಗ್ಲೆಂಡ್​ ಕೋರ್ಟ್​ಗೆ ಕೋರಿವೆ.

ಫ್ರೆಶ್ ನ್ಯೂಸ್

Latest Posts

Featured Videos