ಪಟ್ಟಣದ ಮೂಲಭೂತ ಸೌಕರ್ಯ

ಪಟ್ಟಣದ ಮೂಲಭೂತ ಸೌಕರ್ಯ

ಮಾಲೂರು :  ಪಟ್ಟಣದ ಎಲ್ಲ ವಾರ್ಡ್ ಗಳು  ಮೂಲಭೂತ ಸೌಕರ್ಯ ಅಭಿವೃದ್ದಿಪಡಿಸಿಸುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ತಂದು ಕಾಮಗಾರಿ ಪ್ರಾರಂಭಿಸಿದ್ದು, ಪುರಸಭಾ ಸದಸ್ಯರು, ಅಧಿಕಾರಿ ವರ್ಗ ಅಭಿವೃದ್ದಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಪಟ್ಟಣದ 22ನೇ ವಾರ್ಡಿನಲ್ಲಿ ವಿಶೇಷ ಅನುದಾನದಡಿಯಲ್ಲಿ 20 ಲಕ್ಷ ರೂಗಳ ವೆಚ್ಚದಲ್ಲಿ 600 ಮೀ. ರಸ್ತೆ ಡಾಂಬರಿಕರಣ ನಡೆಯುತ್ತಿದ್ದು, ಡಾಂಬರಿಕರಣ ಗುಣಮಟ್ಟವನ್ನು ವೀಕ್ಷಿಸಿ ಮಾತನಾಡಿದರು.

ಹಿಂದನ ಕಾಂಗ್ರೆಸ್ ಸರಕಾರದಲ್ಲಿ 18 ಕೋಟಿ ರೂ. ವಿಶೇಷ ಅನುದಾನ ಮಂಜೂರಾಗಿದ್ದು, ಮೊದಲ ಹಂತದಲ್ಲಿ 8 ಕೋಟಿ ರೂ. ಬಿಡುಗಡೆಗೊಳಿಸಿ ರಸ್ತೆಗಳ ಅಭಿವೃದ್ದಿ ಕಾಮಗಾರಿ ನಡೆಯುತ್ತಿದೆ. ಪಟ್ಟಣದಲ್ಲಿ ಒಳಚರಂಡಿ, ಸಿಸಿರಸ್ತೆ, ಬೀದಿ ದೀಪಗಳು ಸೇರಿದಂತೆ ಹಲವಾರು ಅಭಿವೃದ್ದಿ ಕಾಮಗಾರಿಗಳು ನಡೆಯಬೇಕಾಗಿದೆ.

ಪಟ್ಟಣದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದ್ದು, 25 ಕೊಳವೆ ಬಾವಿಗಳನ್ನು ಜಿಲ್ಲಾಡಳಿತವತಿಯಿಂದ ಅನುಮೋದನೆ ಮಾಡಿಸಿ ಕೊರೆಸಿಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಬೇಕಾದರೆ ಕೆ.ಸಿ.ವ್ಯಾಲಿ ನೀರು ಹರಿಯಬೇಕಾಗಿದೆ.

ತಾಲೂಕಿಗೆ 5 ಎಂ.ಎಲ್.ಡಿ ನೀರು ಹರಿಸಬೇಕಾಗಿದ್ದು, ಶಿವಾರಪಟ್ಟಣ ಕೆರೆಯಿಂದ 4 ಕೆರೆ ತುಂಬಿದ ನಂತರ ಮಾಲೂರು ದೊಡ್ಡಕೆರೆಗೆ ಸುಮಾರು 1 ತಿಂಗಳಲ್ಲಿ ಹರಿಯಲಿದೆ, ಕೆರೆ ತುಂಬಿದರೆ ಪಟ್ಟಣ ಸುತ್ತಮುತ್ತಲಿನ ಕೊಳವೆ ಬಾವಿಗಳಿಗೆ ನೀರು ಸಂಗ್ರಹಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos