ಏಕದಿನ ಪಂದ್ಯಕ್ಕೆ ಮಾಲಿಂಗ ರೆಡಿ

ಏಕದಿನ ಪಂದ್ಯಕ್ಕೆ ಮಾಲಿಂಗ ರೆಡಿ

ಕೊಲಂಬೊ, ಜು. 26 : ಶ್ರೀಲಂಕಾದ ದಿಗ್ಗಜ ವೇಗದ ಬೌಲರ್ ಲಸಿತ್ ಮಾಲಿಂಗ ಶುಕ್ರವಾರ ತಮ್ಮ ವೃತ್ತಿಬದುಕಿನ ಅಂತಿಮ ಏಕದಿನ ಪಂದ್ಯವನ್ನಾಡಲಿದ್ದು, ಗೆಲುವಿನೊಂದಿಗೆ ದಿಗ್ಗಜ ಕ್ರಿಕೆಟಿಗನಿಗೆ ವಿದಾಯ ನೀಡಲು ಲಂಕಾ ಪಡೆ ರೆಡಿಯಾಗಿದೆ.
ಇಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಪಂದ್ಯದ ಬಳಿಕ ಏಕದಿನ ಕ್ರಿಕೆಟ್ನಿಂದ ನಿವೃತ್ತಿ ಪಡೆಯುವುದಾಗಿ ಅವರು ಘೋಷಿಸಿದ್ದು, ಟಿ20 ಮಾದರಿಯಲ್ಲಿ ಇನ್ನಷ್ಟು ಕಾಲ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಮುಂದಿನ ವರ್ಷ ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಆಡುವ ಗುರಿ ಹೊಂದಿರುವ ಮಾಲಿಂಗರನ್ನು ಟಿ20 ತಂಡದ ಆಯ್ಕೆಗೆ ಪರಿಗಣಿಸುವುದಾಗಿ ಲಂಕಾ ಕ್ರಿಕೆಟ್ ಮಂಡಳಿ ಖಚಿತ ಪಡಿಸಿದೆ. 2011ರಲ್ಲಿ ಮಾಲಿಂಗ ಟೆಸ್ಟ್ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos