ಮಳೆಗಾಗಿ ಕತ್ತೆಗಳ ಮದುವೆ

ಮಳೆಗಾಗಿ ಕತ್ತೆಗಳ ಮದುವೆ

ಬಂಕಾಪುರ, ಜೂ. 28 : ಮಳೆಗಾಗಿ ಪ್ರಾರ್ಥಿಸಿ ಕತ್ತೆಗಳ ಮದುವೆ, ಮೆರವಣಿಗೆ ಪಟ್ಟಣದ ಅರಳೆಲೆಮಠ ಆವರಣದಲ್ಲಿ ಗುರುವಾರ ಕತ್ತೆಗಳ ಮದುವೆ ಮತ್ತು ಮೆರವಣಿಗೆ ನಡೆಸಲಾಯಿತು. ಬೆಳಗ್ಗೆ ಶಾಸ್ತ್ರೋಕ್ತವಾಗಿ ಕತ್ತೆಗೆ ಅರಿಶಿಣ ಕಾರ್ಯಕ್ರಮ ಸುರಗಿ ನೀರಿನ ನಿಯಮ ನೆರವೇರಿಸಿದರು. ನಂತರ ಹೊಸ ಬಟ್ಟೆ ತೊಡಿಸಿ, ಹಣೆಗೆ ಬಾಸಿಂಗ ಕಟ್ಟಿದರು. ಹೂಮಾಲೆ ಹಾಕಿ ಸಾರ್ವಜನಿಕರು ಅಕ್ಷತೆ ಕಾರ್ಯಕ್ರಮ ನೆರವೇರಿಸಿದರು.
ಸರತಿ ಸಾಲಿನಂತೆ ಮುತೈದೆಯರು ಆರತಿಯೊಂದಿಗೆ ಕತ್ತೆಗಳಿಗೆ ಪೂಜಿಸಿ, ಮಳೆಗಾಗಿ ಪ್ರಾರ್ಥಿಸಿದರು. ನಂತರ ಸಕಲ ವಾದ್ಯಮೇಳಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಿತು.

ಫ್ರೆಶ್ ನ್ಯೂಸ್

Latest Posts

Featured Videos