ಮಲೈಕಾ ಅವರಿಗೆ ಹುಟ್ಟುಹಬ್ಬದ ಸಂಭ್ರಮ

ಮಲೈಕಾ ಅವರಿಗೆ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು: ಎಡವಟ್ಟು ಲೀಲಾ ಎಂದಾಕ್ಷಣ ನೆನಪಾಗುವವಳು  ಝೀ ಕನ್ನಡದಲ್ಲಿ ಪ್ರಸಾರ ಆಗುತ್ತಿರೋ ಹಿಟ್ಲರ್​ ಕಲ್ಯಾಣ ಧಾರಾವಾಹಿಯ ಲೀಲಾ. ಈಕೆಯನ್ನು ಲೀಲಾ ಎನ್ನುವ ಬದಲು ಎಡವಟ್ಟು ಲೀಲಾ ಎಂದೇ ಫೇಮಸ್ಸು. ಅಭಿರಾಮ್‌ ಜಯಶಂಕರ್‌ ಅರ್ಥಾತ್‌ ಎಜಿಯ ಪತ್ನಿಯಾಗಿರೋ ಈ ಲೀಲಾ, ಇದೀಗ ಬೆಳ್ಳಿಪರದೆಗೂ ಎಂಟ್ರಿ ಕೊಟ್ಟಿದ್ದು, ಚಿಕ್ಕಣ್ಣನವರ ಪ್ರೇಯಸಿಯಾಗಿದ್ದಾರೆ.

ಚಿಕ್ಕಣ್ಣ ಹೀರೋ ಆಗಿರುವ ‘ಉಪಾಧ್ಯಕ್ಷ’ ಸಿನಿಮಾಕ್ಕೆ ಈಕೆಯೇ ಹೀರೋಯಿನ್‌. ಶರಣ್‌ ನಟನೆಯ ‘ಅಧ್ಯಕ್ಷ’ಚಿತ್ರ ಸೂಪರ್ ಹಿಟ್ ಆಗಿತ್ತು. ಅದರಲ್ಲಿ ಉಪಾಧ್ಯಕ್ಷನ ಪಾತ್ರ ಮಾಡಿದವರು ಚಿಕ್ಕಣ್ಣ. ಇದೀಗ ಅದೇ ಉಪಾಧ್ಯಕ್ಷನ ಕಥೆಯಲ್ಲೇ ಈ ಸಿನಿಮಾ ಇದೆ. ಕಿರುತೆರೆ ಹಾಗೂ ಬೆಳ್ಳಿತೆರೆಯ ಮೇಲೆ ಜಾದೂ ಮಾಡುತ್ತಿರುವ ಲೀಲಾ ನಿಜವಾದ ಹೆಸರು ಮಲೈಕಾ ಟಿ ವಸುಪಾಲ್. ಇಂದು ಮಲೈಕಾ ಅವರಿಗೆ ಹುಟ್ಟುಹಬ್ಬದ ಸಂಭ್ರಮ.

 

 

ಫ್ರೆಶ್ ನ್ಯೂಸ್

Latest Posts

Featured Videos