ಮಕ್ಕಳೊಂದಿಗೆ ತಾಯಿ ಸಾವು

ಮಕ್ಕಳೊಂದಿಗೆ ತಾಯಿ ಸಾವು

ಲಕ್ನೋ, ಜು. 18 : ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿಕೊಂಡು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಉತ್ತರ ಪ್ರದೇಶದ ಘಜಿಯಾಬಾದ್ನ ಮುರಾದ್ ನಗರದ ಪ್ರೀತ್ ವಿಹಾರ್ ಕಾಲೋನಿ ನಿವಾಸಿ ದೀಪಾ(32) ಎಂದು ಗುರುತಿಸಲಾಗಿದೆ. ರೀನಾ(8), ಲಲಿತ(5) ಗಂಡು ಮಗುವಿನ ಮೇಲೆ ಸೀಮೆಎಣ್ಣೆ ಸುರಿಸು ಬೆಂಕಿ ಹಚ್ಚಿ ತಾಯಿ ಆತ್ಮ ಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ, ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದ ಮೂವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದು, ತಾಯಿ ದೀಪಾ ಮತ್ತು ಮಗಳು ರೀನಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಮಗ ಲಲಿತ್ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿ ನರೇಶ್ ಕುಮಾರ್ ಜಾಡಾನ್ ತಿಳಿಸಿದ್ದಾರೆ.
ನರೇಶ್ ಕುಮಾರ್, ಘಟನಾ ಸ್ಥಳದಲ್ಲಿ ಸಂಪೂರ್ಣ ಅವ್ಯವಸ್ಥೆ ಇದೆ. ಪ್ರಕರಣವು ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತೋರುತ್ತದೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos