ಮಕ್ಕಳಿಗೆ ಇನ್ನೂ ಸಿಗದ ಸಮವಸ್ತ್ರಗಳು

ಮಕ್ಕಳಿಗೆ ಇನ್ನೂ ಸಿಗದ ಸಮವಸ್ತ್ರಗಳು

ಬೆಂಗಳೂರು, ಜೂ. 25: ರಜಾ ದಿನಗಳು ಮುಗಿದು ಆಗಲೆ ತಿಂಗಳಾಗುತ್ತ ಬಂದಿದೆ ಆದರೆ ಕೇಲವು ಶಾಲೆಗಳು ಇನ್ನು ಕೂಡ ಮಕ್ಕಳಿಗೆ ಸಿಗಬೇಕಾದ ಸಮವಸ್ತ್ರಗಳು ಸಿಕ್ಕಿಲ್ಲ. ಹೌದು, ಶಾಲೆ ಆರಂಭವಾಗಿ ತಿಂಗಳಾಗುತ್ತಾ ಬಂದಿದ್ದು, ಇನ್ನೂ ಅನೇಕ ಕಡೆಗಳಲ್ಲಿ ಶೂ, ಸಾಕ್ಸ್, ಸಮವಸ್ತ್ರ ಪೂರೈಕೆಯಾಗಿಲ್ಲ.

ಒಂದನೆಯ ತರಗತಿಯಿಂದ 10 ನೇ ತರಗತಿವರೆಗಿನ 44.57 ಲಕ್ಷ ಮಕ್ಕಳಿಗೆ ಒಂದು ಜೊತೆ ಶೂ, ಎರಡು ಜೊತೆ ಸಾಕ್ಸ್ ಉಚಿತವಾಗಿ ವಿತರಿಸಲಾಗುತ್ತದೆ. ಆದರೆ, ಅನೇಕ ಕಡೆಗಳಲ್ಲಿ ಶೂ ಸಾಕ್ಸ್ ವಿತರಣೆಯಾಗಿಲ್ಲ. ಕೆಲವೆಡೆ ಬಾಲಕರಿಗೆ ಸಮವಸ್ತ್ರ ಬಂದಿದ್ದು, ಬಾಲಕಿಯರಿಗೆ ಇನ್ನೂ ಸಮವಸ್ತ್ರ ನೀಡಲಾಗಿಲ್ಲ.

ಶೇ. 95 ರಷ್ಟು ಪಠ್ಯಪುಸ್ತಕಗಳನ್ನು ಪೂರೈಕೆ ಮಾಡಲಾಗಿದೆ. ಕೆಲವರಿಗೆ ಇನ್ನೂ ಪುಸ್ತಕ ಸಿಕ್ಕಿಲ್ಲ. ಕೆಲವು ಕಡೆ ಸೈಕಲ್ ನೀಡಿಲ್ಲ ಎಂದು ಹೇಳಲಾಗಿದೆ. ಜೂನ್ 30 ರೊಳಗೆ ಶೂ, ಸಾಕ್ಸ್ ವಿತರಣೆ ಪೂರ್ಣಗೊಳಿಸಬೇಕೆಂದು ಶಿಕ್ಷಣ ಇಲಾಖೆ ಸೂಚನೆ ನೀಡಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos