ಮಕ್ಕಳ ಮಾರಾಟ ದಂಧೆ ನಡೆಸುತ್ತಿದ್ದ ನರ್ಸಮ್ಮನ

ಮಕ್ಕಳ ಮಾರಾಟ ದಂಧೆ ನಡೆಸುತ್ತಿದ್ದ ನರ್ಸಮ್ಮನ

ತಮಿಳುನಾಡು, . 26, ನ್ಯೂಸ್ ಎಕ್ಸ್ ಪ್ರೆಸ್: ತಮಿಳುನಾಡಿನ ಸೇಲಂ ಜಿಲ್ಲೆಯ ರಾಸಿಪುರಂ ಸರಕಾರಿ ಆಸ್ಪತ್ರೆಯ ನಿವೃತ್ತ ನರ್ಸ್ ಹಾಗೂ ಮಗುವೊಂದನ್ನು ಖರೀದಿಸಲು ಬಂದಿದ್ದ ಪಶ್ಚಿಮ ತಮಿಳುನಾಡು ಭಾಗದ ವ್ಯಕ್ತಿಯೊಬ್ಬರ ಮಧ್ಯೆ ನಡೆದ ಸಂಭಾಷಣೆಯ ರೆಕಾರ್ಡ್ ಈಗ ಎಲ್ಲೆಡೆ ಹರಿದಾಡುತ್ತಿದೆ.

48 ವರ್ಷ ಅಮುದಾ ನವಜಾತ ಶಿಶುಗಳ ಕಾನೂನು ಬಾಹಿರ ಮಾರಾಟ ದಂಧೆಯಲ್ಲಿ ತೊಡಗಿರುವುದನ್ನು ಹತ್ತು ನಿಮಿಷದ ಸಂಭಾಷಣೆಯಲ್ಲಿ ಕೇಳಬಹುದು. ಅಷ್ಟೇ ಅಲ್ಲ, ಯಾರು ಖರೀದಿ ಮಾಡುತ್ತಾರೋ ಅವರದೇ ಹೆಸರಿಗೆ ಮಗುವಿನ ಜನನ ಪ್ರಮಾಣಪತ್ರವನ್ನು ಮಾಡಿಸಿಕೊಡುತ್ತಾರೆ. ಅಲ್ಲಿಗೆ ಎಲ್ಲವೂ ಕಾನೂನು ಬದ್ಧ ಆದಂತೆ. ಮಗು ಗಂಡೋ ಹೆಣ್ಣೋ, ಬಣ್ಣ ಹಾಗೂ ತೂಕದ ಆಧಾರದಲ್ಲಿ ಬೆಲೆ ನಿರ್ಧಾರ ಆಗುತ್ತದೆ. ಹೆಣ್ಣು ಮಗುವಿನ ಬೆಲೆ ಶುರುವಾಗುವುದು ಎರಡೂ ಮುಕ್ಕಾಲು ಲಕ್ಷದಿಂದ.

ಹೆಣ್ಣು ಮಗು ಒಳ್ಳೆ ತೂಕ ಇದ್ದು, ಬೆಳ್ಳಗೆ ಇದ್ದರೆ ಆಗ ಬೆಲೆ 3 ಲಕ್ಷದ ತನಕ ಹೇಳುತ್ತಾರೆ. ಇನ್ನು ಕಪ್ಪು ಬಣ್ಣದ ಗಂಡು ಮಕ್ಕಳಿಗೆ ಮೂರೂ ಕಾಲು ಲಕ್ಷದಿಂದ ಮೂರೂ ಮುಕ್ಕಾಲು ಲಕ್ಷ ಕೇಳುತ್ತಾರೆ. ಅದೇ ಬೆಳ್ಳಗೆ, ಗುಂಡ ಗುಂಡಗೆ ಇರುವ ಆರೋಗ್ಯವಂತ ಮಗುವಿಗೆ 4 ಲಕ್ಷ ರುಪಾಯಿ ಎನ್ನುತ್ತಾಳೆ ಅಮುದಾ. ಆಕೆಗೆ 30 ಸಾವಿರ ಅಡ್ವಾನ್ಸ್ ಕೊಟ್ಟರೆ, ಮಗು ಮಾರಾಟಕ್ಕೆ ಬರುತ್ತಲೇ ತಿಳಿಸುತ್ತೀನಿ ಎನ್ನುತ್ತಾಳೆ ಆಕೆ.

ಅಮುದಾ ನಿರೀಕ್ಷೆ ಮಾಡಿದಂತೆ ಈ ವ್ಯವಹಾರ ಆಗಲಿಲ್ಲವಂತೆ. ಆದರೆ ಆಕೆಗೆ ಮಕ್ಕಳ ಮಾರಾಟದಲ್ಲಿ 30 ವರ್ಷದ ಅನುಭವ ಇದೆಯಂತೆ. ಯಾವಾಗ ಸಂಭಾಷಣೆಯ ಕ್ಲಿಪಿಂಗ್ ಸಾಮಾಜಿಕ ಹರಿದಾಡಲು ಶುರುವಾಯಿತೋ ಆಗ ಪೊಲೀಸರ ಗಮನಕ್ಕೆ ಬಂದು, ಆಕೆಯನ್ನು ಬಂಧಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos