ಮಾಜಿದ್ ‘ಮ್ಯಾಜಿಕ್ ‘

ಮಾಜಿದ್ ‘ಮ್ಯಾಜಿಕ್ ‘

ಮಾಜಿದ್ ‘ಮ್ಯಾಜಿಕ್’ ಇಸ್ಮಾಯಿಲಿ ಹೆಸರಿನ ಈ ವ್ಯಕ್ತಿ ತನ್ನ ಮನೆಯನ್ನೇ ಪಕ್ಷಿಧಾಮವನ್ನಾಗಿ ಮಾಡಿಕೊಂಡು, 200ಕ್ಕೂ ಹೆಚ್ಚು ತಳಿಯ ಪಕ್ಷಿಗಳೊಂದಿಗೆ ವಾಸಿಸುತ್ತಿದ್ದಾರೆ. ಟಾಂಪಾ ಎಂಬ ಊರಿನಲ್ಲಿ ಝಾಕ್ಸಿ ಗಿಳಿಗಳ ಧಾಮವೊಂದನ್ನು ಮಾಜಿದ್ ನಡೆಸಿಕೊಂಡು ಹೋಗುತ್ತಿದ್ದಾರೆ. ವಿಚಿತ್ರ ಸಮಸ್ಯೆ ಎದುರಾಗಿದೆ. ತಾವಿರುವ ಸುತ್ತಲಿನ ಎಲ್ಲ ಕಡೆಗಳಲ್ಲೂ ಇತರರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಮಾಜಿದ್ ತಮ್ಮ ಮನೆಯಿಂದ ಹೊರ ಬರಲು ಇರುವ ಏಕೈಕ ಜಾಗವೆಂದರೆ, ಅವರ ಪಕ್ಕದಲ್ಲಿರುವ ಮತ್ತೊಬ್ಬರ ಮನೆಯ ಮುಖಾಂತರ. ಇತ್ತೀಚೆಗೆ ಆ ವ್ಯಕ್ತಿಯು ತನ್ನ ಮನೆಯ ಗೇಟ್ಗಳನ್ನು ಮುಚ್ಚಿಕೊಂಡಿದ್ದು, ಮಾಜಿದ್ರನ್ನು ಅವರ ಮನೆಯಲ್ಲಿಯೇ ಕೂಡಿ ಹಾಕಿದ್ದಾರೆ. ಅದೃಷ್ಟವಶಾತ್ ತಮ್ಮ ಮನೆಯಂಗಳಲ್ಲಿ ಬೆಳೆಯುವ ಗಿಡಗಳಲ್ಲಿ ಸಿಗುವ ಬಾಳೆಹಣ್ಣು ಹಾಗೂ ಬಿದಿರನ್ನು ತಿಂದುಕೊಂಡು ಕಾಲ ಕಳೆಯುತ್ತಿದ್ದಾರಂತೆ ಮಾಜಿದ್.

ಫ್ರೆಶ್ ನ್ಯೂಸ್

Latest Posts

Featured Videos