ಮೈತ್ರಿ ನಾಯಕರ ಚರ್ಚೆ

ಮೈತ್ರಿ ನಾಯಕರ ಚರ್ಚೆ

ಬೆಂಗಳೂರು, ಜು. 18 : ಶಾಸಕರ ರಾಜೀನಾಮೆ ವಿಷಯದಲ್ಲಿ ಸ್ಪೀಕರ್ಗೆ ಪರಮಾಧಿಕಾರ ಎಂದು ಸುಪ್ರೀಂಕೋರ್ಟ್ ತಿಳಿಸಿದ ಹಿನ್ನೆಲೆ ಸ್ಪೀಕರ್ ಕಚೇರಿ ಮತ್ತೆ ಬುಧವಾರ ಚಟುವಟಿಕೆ ಕೇಂದ್ರವಾಗಿತ್ತು. ಮೈತ್ರಿ ನಾಯಕರಾದ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ, ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ದಿನೇಶ್ ಗುಂಡೂರಾವ್, ಕೆ.ಜೆ.ಜಾರ್ಜ್, ಎಚ್.ಡಿ. ರೇವಣ್ಣ, ಐವಾನ್ ಡಿಸೋಜ ಅವರು ಸ್ಪೀಕರ್ ರಮೇಶ್ಕುಮಾರ್ ಭೇಟಿ ಮಾಡಿ, ವಿಶ್ವಾಸ ಮತಯಾಚನೆ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದರು.

ಶಾಸಕರ ರಾಜೀನಾಮೆ ಪ್ರಕರಣಗಳ ನಿರ್ಣಯ ಬಾಕಿ ಇರುವುದರಿಂದ ವಿಶ್ವಾಸ ಮತಯಾಚನೆ ಮಾಡುವುದನ್ನು ಮುಂದಕ್ಕೆ ಹಾಕಬಹುದಾ? ಎನ್ನುವ ಮೈತ್ರಿ ನಾಯಕರ ಪ್ರಸ್ತಾಪಕ್ಕೆ ಸ್ಪೀಕರ್ ಸಮ್ಮತಿ ನೀಡಲಿಲ್ಲ. ಈಗ ಏನು ನಿರ್ಣಯ ಆಗಿದೆಯೋ ಅದೇ ರೀತಿ ನಡೆಯಬೇಕು. ಎಲ್ಲವೂ ಸುಪ್ರೀಂಗೆ ವರದಿ ನೀಡಬೇಕಾಗುತ್ತದೆ ಎಂದು ಸ್ಪೀಕರ್ ಪ್ರತಿಕ್ರಿಯಿಸಿದರು ಎಂದು ತಿಳಿದುಬಂದಿದೆ. ಏತನ್ಮಧ್ಯೆ, ಬಿಜೆಪಿ ನಾಯಕರಾದ ಮಾಧುಸ್ವಾಮಿ, ಬೋಪಯ್ಯ ನೇತೃತ್ವದ ತಂಡ ಸ್ಪೀಕರ್ ಭೇಟಿ ಮಾಡಿ ರ್ಚಚಿಸಿದರು. ಯಾವ ಕಾರಣಕ್ಕೂ ವಿಶ್ವಾಸ ಮತಯಾಚನೆ ಮುಂದೂಡುವುದು ಬೇಡ. ನಿಗದಿಯಂತೆ ಪ್ರಕ್ರಿಯೆ ನಡೆಯಲಿ ಅಂತ ಆಗ್ರಹಿಸಿದರು ಎಂದು ಮೂಲಗಳು ತಿಳಿಸಿವೆ.

ಫ್ರೆಶ್ ನ್ಯೂಸ್

Latest Posts

Featured Videos