ಮಹಿಳೆಗೆ ಶಾಕ್ ಕೊಟ್ಟ ಮೊಸಳೆ

ಮಹಿಳೆಗೆ ಶಾಕ್ ಕೊಟ್ಟ ಮೊಸಳೆ

ಕ್ಯಾನ್ ಬೇರಾ, ಆ. 31 : ಗಾಳ ಹಾಕಿ ನೀರಿನಿಂದ ಮೀನು ಹೊರ ತೆಗೆದು ಅದನ್ನು ಎಳೆದುಕೊಂಡು ಹೋಗುತ್ತಿದ್ದ ಮಹಿಳೆ, ಇನ್ನೋರ್ವನಿಗೆ ನೀರಿನಲ್ಲಿದ್ದ ಮೊಸಳೆ ಶಾಕ್ ನೀಡಿದೆ. ಆಸ್ಟ್ರೇಲಿಯಾದ ಉತ್ತರ ಒಳನಾಡು ಪ್ರದೇಶದಲ್ಲಿರುವ ಕಾಕಾಡು ರಾಷ್ಟ್ರೀಯ ಉದ್ಯಾನವನದ ಕಾಹಿಲ್ಸ್ ಕ್ರಾಸಿಂಗ್ ಮೊಸಳೆ ಸಂರಕ್ಷಣಾ ಪ್ರದೇಶದಲ್ಲಿ ನಡೆದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ.
ಗಾಳಕ್ಕೆ ದೊಡ್ಡ ಮೀನೊಂದು ಬೀಳುತ್ತಿದ್ದಂತೆ ಅದನ್ನು ಹೊರತೆಗೆದು ಗಾಳದೊಂದಿಗೇ ಎಳೆದುಕೊಂಡು ಹೋಗುತ್ತಿರುತ್ತಾರೆ. ಕೆಲವೇ ಸೆಕೆಂಡ್ಗಳಲ್ಲಿ ನೀರಿನಲ್ಲಿದ್ದ ಹಸಿದ ಮೊಸಳೆ ಬೇಗಬೇಗ ದಡಕ್ಕೆ ಬರುತ್ತದೆ. ಮೀನನ್ನು ಕಚ್ಚಿ ಎಳೆದುಕೊಳ್ಳುತ್ತದೆ. 12,000 ಜನರು ಶೇರ್ ಮಾಡಿಕೊಂಡಿದ್ದು, 5,500ಕ್ಕೂ ಹೆಚ್ಚು ಮಂದಿ ರಿಯಾಕ್ಟ್ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos