ಮಹಿಳಾ ಶಿಲೆಯ ಎದೆಯ ಭಾಗ ಮುಚ್ಚಿ ವಿವಾದಕ್ಕೀಡಾದ ಸರ್ಕಾರ

ಮಹಿಳಾ ಶಿಲೆಯ ಎದೆಯ ಭಾಗ ಮುಚ್ಚಿ ವಿವಾದಕ್ಕೀಡಾದ ಸರ್ಕಾರ

ಇಂಡೋನೇಷ್ಯಾ, ಮಾ. 29, ನ್ಯೂಸ್ ಎಕ್ಸ್ ಪ್ರೆಸ್: ಇಂಡೋನೇಷ್ಯಾದ ಥೀಮ್ ಪಾರ್ಕ್ ಒಂದರಲ್ಲಿ 15 ವರ್ಷಗಳಿಂದಲೂ ಮಹಿಳೆಯ ಸುಂದರ ಶಿಲ್ಪವೊಂದಿದೆ. ಈ ಶಿಲ್ಪ ಇದುವರೆಗೆ ಬೆತ್ತಲಾಗಿಯೇ ಇತ್ತು.

ಆದರೆ ಈಗ ಸರ್ಕಾರ ಇದ್ದಕ್ಕಿದ್ದ ಹಾಗೆ ಶಿಲ್ಪದ ಎದೆಯ ಭಾಗಕ್ಕೆ ಚಿನ್ನದ ಬಣ್ಣದ ಬಟ್ಟೆ ಮುಚ್ಚಿ ಟೀಕೆಗೆ ಗುರಿಯಾಗಿದೆ. ಈ ನಿರ್ಧಾರ ತೆಗೆದುಕೊಳ್ಳಲು ಮುಖ್ಯ ಕಾರಣ. ಕುಟುಂಬದವರೊಂದಿಗೆ ಬರುವವರಿಗೆ ಈ ಶಿಲ್ಪಕಲೆ ಮುಜುಗರ ತರಬಹುದು ಎಂಬ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸಮಜಾಯಿಷಿ ನೀಡಿದೆ. ಅಂದಹಾಗೇ ಇದೂವರೆಗೂ ಕಲೆಯ  ದೃಷ್ಟಿಯಿಂದ ನೋಡುತ್ತಿದ್ದ ಜನರಿಗೆ ಇದೀಗ ಶಿಲ್ಪವನ್ನು ಮುಚ್ಚಿದ್ದರಿಂದ ಈಗ ಮುಜುಗರವಾಗ್ತಿದೆ. ಸುಮ್ಮನೇ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ, ಹೀಗೆ ಮಾಡಬಾರದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಷ್ಟು ದಿನ ಇಲ್ಲದ ಮುಜುಗರ ಈಗ ಹೇಗೆ ಸೃಷ್ಟಿಯಾಗುತ್ತದೆ? ಇದುವರೆಗೆ ಈ ಶಿಲ್ಪವನ್ನು ಕಲೆಯ ದೃಷ್ಟಿಯಿಂದಲೇ ನೋಡುತ್ತಿದ್ದೆವು ಹೊರತು, ಅಶ್ಲೀಲ ದೃಷ್ಟಿಯಿಂದ ಅಲ್ಲ ಎನ್ನುವುದು ಜನರ ವಾದವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos