ಮಹಿಳೆ ಸ್ನಾನದ ದೃಶ್ಯ ಸೆರೆ ಹಿಡಿದ ಯುವಕ ಅರೆಸ್ಟ್!

ಮಹಿಳೆ ಸ್ನಾನದ ದೃಶ್ಯ ಸೆರೆ ಹಿಡಿದ ಯುವಕ ಅರೆಸ್ಟ್!

ಗುಂಟೂರು, ಮೇ.15, ನ್ಯೂಸ್ ಎಕ್ಸ್ ಪ್ರೆಸ್: ಆಂಧ್ರಪ್ರದೇಶದ ಗುಂಟೂರಿನಲ್ಲಿ ಮಹಿಳೆಯೊಬ್ಬಳ‍್ಳು ಸ್ನಾನ ಮಾಡುವ ಸಂದರ್ಭದಲ್ಲಿ ಯುವಕನೊಬ್ಬ ತನ್ನ ಮೊಬೈಲ್ ನಲ್ಲಿ ದೃಶ್ಯಗಳನ್ನು ಸೆರೆಹಿಡಿದು ಮಹಿಳೆಗೆ ಬ್ಲಾಕ್ ಮೇಲ್ ಮಾಡಿದ ಘಟನೆ ನಡೆದಿದೆ.

ಮಹಿಳೆ ಆತ್ಮಹತ್ಯೆ ಯತ್ನ!

ಕೂಲಿಕಾರ್ಮಿಕ ಕುಟುಂಬವೊಂದು ಹಲವು ವರ್ಷಗಳ ಹಿಂದೆ ಶ್ರೀಕಾಕುಳಂನಿಂದ ಗುಂಟೂರುಗೆ ಬಂದು ನೆಲೆಸಿತ್ತು. ಹಲವು ದಿನ ಹೊಂಚು ಹಾಕಿದ್ದ ಯುವಕನೊಬ್ಬ ಕೂಲಿ ಕಾರ್ಮಿಕ ಮಹಿಳೆ ಕೂಲಿ ಕಾರ್ಮಿಕ ಮಹಿಳೆ ಸ್ನಾನ ಮಾಡುವ ದೃಶ್ಯ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾನೆ. ಈ ವಿಷಯ ಮಹಿಳೆಗೆ ಗೊತ್ತಾಗಿ ಪ್ರಶ್ನಿಸಿದ್ದಾರೆ. ಯಾರಿಗಾದರೂ ಈ ವಿಷಯ ತಿಳಿಸಿದರೆ, ಇದನ್ನು ನಾನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಯುವಕ ಮಹಿಳೆಗೆ ಬ್ಲಾಕ್ ಮೇಲ್ ಮಾಡಿದ್ದಾನೆ. ಯುವಕನ ಕುಟುಂಬದವರಿಗೆ ಈ ವಿಷಯ ತಿಳಿಸಿದ್ದರೂ ಕೂಡ ಏನೂ ಪ್ರಯೋಜನವಾಗಿಲ್ಲ. ಪೋಷಕರು ಬುದ್ಧಿವಾದ ಹೇಳುವ ಬದಲು ಅವನ ಬೆಂಬಲಕ್ಕೆ ನಿಂತಿದ್ದಾರೆ. ಇದರಿಂದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದು, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ಮಹಿಳೆಯ ಪತಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos