ಮಹರ್ಷಿ ವಾಲ್ಮೀಕಿ ಪ್ರತಿಮೆ ಪೂಜೆಗೆ ಅಡ್ಡಿ

ಮಹರ್ಷಿ ವಾಲ್ಮೀಕಿ ಪ್ರತಿಮೆ ಪೂಜೆಗೆ ಅಡ್ಡಿ

ದೇವನಹಳ್ಳಿ, ನ. 06: ತಾಲೂಕಿನ ಬಿದಲೂರು ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಯುವಕ ಸಂಘಂದ ವತಿಯಿಂದ ಅನುಮತಿ ಪಡೆದು ಸಾರ್ವಜನಿಕ ಸ್ಥಳದಲ್ಲಿ  ಮಹರ್ಷಿ ವಾಲ್ಮೀಕಿ ಪ್ರತಿಮೆ ಸ್ಥಾಪಿಸಲಾಗಿತ್ತು. ರಾಜಕೀಯ ಪ್ರಭಾವ ಬೆಳೆಸಿ ತಾಪಂ ಅಧಿಕಾರಿಗಳು ಮತ್ತು ಪೋಲೀಸರಿಂದ ಸ್ಥಗಿತ ಗೊಳಿಸಲು ಕೈ ಗೊಳ್ಳುತ್ತಿರುವುದನ್ನು ವಿರೋಧಿಸಿ ಮಹರ್ಷಿ ವಾಲ್ಮೀಕಿ ಯುವಕರ ಸಂಘದ ಸಮುದಾಯ ಆಕ್ರೋಶ ವ್ಯಕ್ತ ಪಡಿಸಿದರು.

ಮಹರ್ಷಿ ವಾಲ್ಮೀಕಿ ಯುವಕರ ಸಂಘ 18/07/2019ರಲ್ಲಿ ಬಿದಲೂರು ಗ್ರಾಮ ಪಂಚಾಯಿತಿಗೆ ಪುತ್ತಳಿ ಅನಾವರಣ ಮಾಡಲು ಅನುಮತಿ ಪಡೆಯಲು ಮನವಿ ಸಲ್ಲಿಸಿತ್ತು. 03/08/2018 ರಲ್ಲಿ ಅನುಮತಿ ಪತ್ರವನ್ನು ಗ್ರಾಪಂ ಅಭಿವೃದ್ಧಿ ಅಧಿಕಾರಿ ನೀಡಿದ್ದರು. ಪುತ್ತಳಿ ಮಹರ್ಷಿ ವಾಲ್ಮೀಕಿ ಪ್ರತಿಮೆ ನಿರ್ಮಾಣಕ್ಕೆ ಪೋಲೀಸ್ ಇಲಾಖೆ ಯಿಂದಲೂ ಸಹ ಅನುಮತಿ ಪಡೆಯಲಾಗಿದೆ ಎಂದು ಯುವಕ ಸಂಘದ ಅಧ್ಯಕ್ಷ ಬಿ ಎಮ್ ಮುನೀಂದ್ರ ಹೇಳಿದರು.

ಯುವಕ ಸಂಘದ ಕಾರ್ಯದರ್ಶಿ ನಾಗೇಂದ್ರ ಮಾತನಾಡಿ, ಕಳೆದ 3 ವರ್ಷಗಳಿಂದ ಮಹರ್ಷಿ ವಾಲ್ಮೀಕಿ ಪ್ರತಿಮೆ ನಿರ್ಮಿಸಲು ಉದ್ಧೇಶಿಸಲಾಗಿತ್ತು. ಗ್ರಾಪಂ ಗೆ ಜಾಗ ನೀಡಲು ಅನುಮತಿಗಾಗಿ ಪತ್ರ ನೀಡಲಾಗಿತ್ತು ಅದರಂತೆ ಅನುಮತಿ ಪತ್ರ ಸಿಕ್ಕಿದ ನಂತರವೂ ವಾಲ್ಮೀಕಿ ಪ್ರತಿಮೆ ಸ್ಥಾಪಿಸಲಾಗಿದೆ. ವಾಲ್ಮೀಕಿ ನಾಯಕ ಜನಾಂಗದ ಮುಖ್ಯಸ್ಥರು ಹಾಗೂ ಗ್ರಾಮಸ್ಥರು ಸೇರಿ ಪ್ರತಿಮೆ ಉದ್ಘಾಟನೆ ಮಾಡಲಾಗಿದೆ. ಗ್ರಾಮದಲ್ಲಿ ಕೆಲವರು ಅಡ್ಡಿ ಪಡಿಸುತ್ತಿದ್ದಾರೆ. ವಾಲ್ಮೀಕಿ ಯು ರಾಮಾಯಣ ಬರೆಯುವುದರ ಮೂಲಕ ಎಲ್ಲಾ ಸಮುದಾಯಕ್ಕೂ ಅವಕಾಶ ನೀಡುವಂತೆ ಮಾಡಿದ್ದಾರೆ. ದಲಿತರ ಮೇಲೆ ಏಕೆ ಈ ರೀತಿಯ ಶೋಷಣೆ ಮಾಡುತ್ತಿರುವುದು ಅರ್ಥವಾಗುತ್ತಿಲ್ಲ. ಯಾರೂ ಅಡ್ಡಿ ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಪೋಲೀಸರಿಂದ ಅಡ್ಡಿ ಮಾಡುತ್ತಿದ್ದಾರೆ ಯಾವುದೇ ರೀತಿಯ ಬೆಂಬಲ ಇಲ್ಲದೆ ಶಾಸಕರ ಗಮನಕ್ಕೆ ತಂದಿಲ್ಲ. ಪಂಚಾಯಿತಿ ಗಮನಕ್ಕೆ ತಂದು ಮಾಡುತ್ತಿದ್ದೇವೆ. ಪುಜೆ ಮಾಡಲು ಪೋಲೀಸರು ಅಡ್ಡಿ ಮಾಡುತ್ತಿದ್ದಾರೆ. ಮೇಲಿನ ಅಧಿಕಾರಿಗಳು ಒತ್ತಡ ಹೆರುತ್ತಿದ್ದಾರೆ. ಪ್ರಾಣ ಹೋದರೂ ಸಹ ವಾಲ್ಮೀಕಿ ಪ್ರತಿಮೆ ಅನಾವರಣ ಗೊಳಿಸಲಾಗಿದೆ. ವಾಲ್ಮಕಿ ಜಯಂತಿ ಮಾಡೇ ಮಾಡುತ್ತೇವೆ ಎಂದರು.

ಗ್ರಾಪಂ ಅಧ್ಯಕ್ಷ ಮುನಿರಾಜು ಮಾತನಾಡಿ ಬಿದಲೂರು ಗ್ರಾಮದಲ್ಲಿ ವಾಲ್ಮೀಕಿ ಪ್ರತಿಮೆ ಅನಾವರಣಕ್ಕೆ ಏಕೆ ಅಡ್ಡಿ ಮಾಡುತ್ತಿದ್ದಾರೆ. ಆವತಿ ಗ್ರಾಮದಲ್ಲಿ ರಣ ಬೈರೇಗೌಡರು, ಕನಕ ದಾಸರ ಪ್ರತಿಮೆಗಳನ್ನು ಇಟ್ಟಿದ್ದಾರೆ. ಅದಕ್ಕೆ ಯಾವ ರೀತಿ ಅನುಮತಿ ನೀಡಿದ್ದಾರೆ ಎಂದು ತಾಪಂ ಅಧಿಕಾರಿ ಸ್ಪಷ್ಠ ಪಡಿಸಬೇಕು.  ತಾಪಂ ಕಾರ್ಯ ನಿರ್ವಹಣಾಧಿಕಾರಿ ಯಥಾ ಸ್ಥಿತಿ ಕಾಯ್ದು ಕೊಳ್ಳುವಂತೆ ಆದೇಶಿಸುತ್ತೇನೆ ಎಂದು ಹೇಳಿದ್ದಾರೆ. ಸುಮ್ಮನೆ ನಮೆಗೆ ತೊಂದರೆ ಮಾಡುತ್ತಿತ್ತಾರೆ. ಈಗಾಗಲೇ ಪೂಜೆಯನ್ನು ಸಹ ಮಾಡುತ್ತಿದ್ದೇವೆ. ಯುವಕರು ಎಲ್ಲಾ ಕಾನೂನು ರೀತಿಯಲ್ಲಿಯೇ ಅನುಮತಿ ಮಡೆದು ಪ್ರತಿಷ್ಠಾಪನೆ ಮಾಡುತ್ತಿದ್ದಾರೆ ಎಂದು ಹೇಳಿದರು.

ತಾಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಡೈರೀ ನಾಗೇಶ್ ಬಾಬು ಮಾತನಾಡಿ, ಸರ್ವಧರ್ಮ ಚಿಂತಕ ಅಣ್ಣ ತಮ್ಮಂದಿರು ಯಾವ ರೀತಿ ಇರಬೇಕು. ಇನ್ನಿತರೆ ಜಾತಿಗಳು ಯಾವ ರೀತಿ ಇರಬೇಕು ಎಂಬುವುರ ಬಗ್ಗೆ ರಾಮಾಯಣದ ಮೂಲಕ ಮಹರ್ಷಿ ವಾಲ್ಮೀಕಿ ತಿಳಿಸಿದ್ದಾರೆ. ಅಂತಹ ಮಹಾನ್ ವ್ಯಕ್ತಿಯ ಪ್ರತಿಮೆ ಅನಾವರಣಕ್ಕೆ ಒಂದು ಹೆಜ್ಜೆ ಮುಂದೆ ಇರುತ್ತೇವೆ . ಎಲ್ಲರೂ ಸೇರಿ ಬೆಂಬಲ ನೀಡುತ್ತಿದ್ದೇವೆ. ಗ್ರಾಮದಲ್ಲಿ 2-3 ಜನರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಇದು ನಿಲ್ಲುವ ವಿಚಾರವೋ ವಾಲ್ಮೀಕಿ ಬರೆದಿರುವ ರಾಮಾಯಣವನ್ನು ಬದಲಾಯಿಸುವುದು ಆಗುವುದಿಲ್ಲ. ಅವರ ಬುದ್ದಿ ಕೆಡುವುದಲ್ಲದೆ ಇನ್ನೊಬ್ಬರ ಬುದ್ದಿಯನ್ನು ಸಹ ಕೆಡಿಸುತ್ತಿದ್ದಾರೆ. ಅಡ್ಡಿ ಪಡೆಸುತ್ತಿರುವವರು ಯಾರೇ ಬಂದರೂ ಅವರನ್ನು ಸ್ವಾಗತಿಸುತ್ತೇವೆ ಎಂದರು.

 

ಫ್ರೆಶ್ ನ್ಯೂಸ್

Latest Posts

Featured Videos