ಮಹಾಬಲಿಪುರಂನಲ್ಲಿ ಅನೌಪಚಾರಿಕ ಸಭೆ

ಮಹಾಬಲಿಪುರಂನಲ್ಲಿ ಅನೌಪಚಾರಿಕ ಸಭೆ

ಮಹಾಬಲಿಪುರಂ, ಅ. 11 : ಅಕ್ಟೋಬರ್ 11 ಮತ್ತು 12 ರಂದು ತಮಿಳುನಾಡಿನ ಮಹಾಬಲಿಪುರಂನಲ್ಲಿನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಅನೌಪಚಾರಿಕ ಸಭೆಗೆ ಸಕಲ ಸಿದ್ಧತೆಯಾಗಿದೆ. ಕಡಲತೀರದ ನಗರಿ ಅಕ್ಷರಶಃ ಭದ್ರ¬ಕೋಟೆಯಾಗಿ ಬದಲಾಗಿದೆ. ಚೆನ್ನೈನಿಂದ 56 ಕಿ.ಮೀ ದೂರದ ಮಹಾಬಲಿಪುರಂ ಇಂಡಿಯಾ¬-ಚೀನಾ ಶೃಂಗಸಭೆ ಆಯೋಜನೆಗೊಂಡಿದೆ. ಈ ಹಿನ್ನೆಲೆಯಲ್ಲಿಐದು ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾ¬ಗಿದ್ದು, ಸಮೀಪದ ಬಂದರಿನಲ್ಲಿನೌಕಾ¬ಪಡೆಯ ಹಡಗನ್ನು ಕೂಡ ತುರ್ತು ಪರಿಸ್ಥಿತಿ ಎದುರಾದರೆ ನಿರ್ವಹಣೆಗೆ ಸನ್ನದ್ಧವಾಗಿರಿಸಲಾ¬ಗಿದೆ.
ಮತ್ತೊಂದು ಸಮರ ನೌಕೆ ಕಡಲಿನಲ್ಲಿಗಸ್ತು ತಿರುಗುತ್ತಿದೆ. 15ಕ್ಕೂ ಅಧಿಕ ತಾತ್ಕಾಲಿಕ ಭದ್ರತಾ ತಪಾಸಣಾ ಚೌಕಿಗಳನ್ನು ಪೊಲೀಸರು ನಗರದಲ್ಲಿಸ್ಥಾಪಿಸಿದ್ದಾರೆ. 800ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳ, ವಿಶೇಷ ಭದ್ರತಾ ಪಡೆ (ಎಸ್ಪಿಜಿ) ದಿನದ 24 ಗಂಟೆ ನಗರದಲ್ಲಿತಪಾಸಣೆ ನಡೆಸುತ್ತಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಫ್ರೆಶ್ ನ್ಯೂಸ್

Latest Posts

Featured Videos