ಬೀದಿ ನಾಯಿಗಳ ದಾಳಿ ಮಗು ಬಲಿ

ಬೀದಿ ನಾಯಿಗಳ ದಾಳಿ ಮಗು ಬಲಿ

ಬೆಂಗಳೂರು, ಜೂ.26 :ನಗರದಲ್ಲಿ ಬೀದಿನಾಯಿಗಳ ಉಪಟಳ ಮತ್ತೆ ಹೆಚ್ಚಾಗಿದ್ದು, ಸೋಲದೇವನಹಳ್ಳಿಯಲ್ಲಿ ಮಂಗಳವಾರ ಬೀದಿನಾಯಿಗಳ ದಾಳಿಯಿಂದಾಗಿ ಪುಟಾಣಿ ಬಾಲಕ ಮೃತಪಟ್ಟಿದ್ದಾನೆ. ಸೋಲದೇವನಹಳ್ಳಿಯ ಅಜ್ಜೇಗೌಡಪಾಳ್ಯದಲ್ಲಿ ಕಟ್ಟಡ ಕಾರ್ವಿುಕ ಕಲಬುರಗಿ ಜಿಲ್ಲೆ ಸೇಡಂ ಮೂಲದ ಮಲ್ಲಪ್ಪ- ಮಲ್ಲಮ್ಮ ದಂಪತಿ ಪುತ್ರ ದುರ್ಗೆಶ್ (5) ನಾಯಿಗಳ ಕ್ರೂರ ದಾಳಿಗೆ ಬಲಿಯಾಗಿದ್ದಾನೆ.

ಪ್ರತಿದಿನ ತಾಯಿಯೊಂದಿಗೆ ಕಟ್ಟಡ ನಿರ್ಮಾಣ ಸ್ಥಳಕ್ಕೆ ಬರುತ್ತಿದ್ದ ಬಾಲಕ ಮುಂಭಾಗದ ರಸ್ತೆಯಲ್ಲಿ ಆಟವಾಡುತ್ತಿದ್ದ, ಮಂಗಳವಾರ ಮಧ್ಯಾಹ್ನವೂ ಅಲ್ಲಿಯೇ ಇದ್ದ ಬಾಲಕ ಸಮೀಪದ ತೋಪಿನ ಬಳಿ ಆಟಕ್ಕೆ ತೆರಳಿದ್ದ. ಅಲ್ಲಿದ್ದ ನಾಯಿಗಳ ಹಿಂಡು ಆತನ ಮೇಲೆ ದಾಳಿ ನಡೆಸಿವೆ. ನಂತರ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಬಾಲಕ ಅಸುನೀಗಿದ್ದಾನೆ. ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.

 

ಫ್ರೆಶ್ ನ್ಯೂಸ್

Latest Posts

Featured Videos