ಮಹಾರಾಷ್ಟ್ರದಲ್ಲಿ ಭೂ ಕಂಪನ

ಮಹಾರಾಷ್ಟ್ರದಲ್ಲಿ ಭೂ ಕಂಪನ

ಮುಂಬೈ,ಜು. 25 : ಮಹಾರಾಷ್ಟ್ರದ ಎರಡು ಕಡೆ ಭೂಮಿ ಕಂಪಿಸಿದೆ. 12 ನಿಮಿಷದ ಅಂತರದಲ್ಲಿ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಭೂಕಂಪನದ ಅನುಭವವಾಗಿದೆ. ಭೂಕಂಪನವು 1.03 ಗಂಟೆಗೆ ನಡೆದಿದ್ದು, ರಿಕ್ಟರ್ ಮಾಪಕದಲ್ಲಿ 3.8ರಷ್ಟು ತೀವ್ರವಾಗಿತ್ತು. ಭೂಕಂಪವು 1.15ರ ಸುಮಾರಿಗೆ ಕೂಡಾ ಲಘು ಭೂಕಂಪವೇ ಆಗಿದ್ದು, ಇದರ ತೀವ್ರತೆ 3.6ರಷ್ಟು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. 2018ರಿಂದ ಪದೇ ಪದೇ ಭೂಕಂಪನದ ಅನುಭವವಾಗುತ್ತಿದೆ. ಭೂಕಂಪನದ ಮೂಲ ದುಧಲ್ವಾಡಿ ಗ್ರಾಮದಲ್ಲಿದೆ.ಪಾಲ್ಘರ್ ಜಿಲ್ಲಾಡಳಿತ ಈ ಪ್ರದೇಶದಲ್ಲಿ ಭೂಕಂಪನದಂತಹ ತುರ್ತು ಸಮಯದಲ್ಲಿ ನಡೆಸಬೇಕಾದ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದೆ.

ಫ್ರೆಶ್ ನ್ಯೂಸ್

Latest Posts

Featured Videos