ಪಾಪಿ ತಂದೆ ಮಗಳ ಮೇಲೆ ಅತ್ಯಾಚಾರ ನಡೆಸಿ 2 ಬಾರಿ ಗರ್ಭಪಾತ ಮಾಡಿಸಿದ!

ಪಾಪಿ ತಂದೆ ಮಗಳ ಮೇಲೆ ಅತ್ಯಾಚಾರ ನಡೆಸಿ 2 ಬಾರಿ ಗರ್ಭಪಾತ ಮಾಡಿಸಿದ!

ಫಿರೋಜಾಬಾದ್, ಮೇ.6, ನ್ಯೂಸ್ ಎಕ್ಸ್ ಪ್ರೆಸ್: ಮಗಳ ಮೇಲೆ ಅತ್ಯಾಚಾರವೆಸಗುತ್ತಿದ್ದ 40 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿ ಘಟನೆ ನಡೆದಿದೆ. ಕಳೆದ 6 ವರ್ಷಗಳಿಂದ 19 ವರ್ಷದ ಮಗಳ ಮೇಲೆ ತಂದೆ ಅತ್ಯಾಚಾರವೆಸಗುತ್ತಿದ್ದನಂತೆ. ಕೆಲ ದಿನಗಳ ಹಿಂದೆ ಮತ್ತೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಪೀಡಿತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಆರು ವರ್ಷದಲ್ಲಿ ಮೂರು ಬಾರಿ ಪೀಡಿತೆ ಗರ್ಭಿಣಿಯಾಗಿದ್ದಳಂತೆ. ಎರಡು ತಿಂಗಳ ಮಗುವಿನ ತಾಯಿಯೂ ಹೌದು. ಹೊಡೆದು, ಹಿಂಸೆ ನೀಡ್ತಿದ್ದ ಕಾರಣ ಆಕೆ ತಾಯಿ ಬಾಯಿ ಮುಚ್ಚಿಕೊಂಡಿದ್ದಳಂತೆ. ದೂರಿನ ಪ್ರಕಾರ, ಎರಡು ಬಾರಿ ತಂದೆ ಗರ್ಭಪಾತ ಮಾಡಿಸಿದ್ದನಂತೆ. ಹೆರಿಗೆಯಾದ್ಮೇಲೆ ಆರೋಪಿ, ಪೀಡಿತೆಯ ವಿವಾಹ ಮಾಡಿದ್ದನಂತೆ. ಮದುವೆ ನಂತ್ರ ತವರಿಗೆ ಬಂದಿದ್ದ ಮಗಳ ಮೇಲೆ ಮತ್ತೆ ಅತ್ಯಾಚಾರಕ್ಕೆ ಯತ್ನಿಸಿದ್ದನಂತೆ. ಭಯಗೊಳ್ಳದ ಪೀಡಿತೆ ಆಗ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos