ಮಾಫಿಯಾ ಚಿತ್ರತಂಡ ದಿಂದ ಹೊಸ ಹಾಡು ಬಿಡುಗಡೆ!

ಮಾಫಿಯಾ ಚಿತ್ರತಂಡ ದಿಂದ ಹೊಸ ಹಾಡು ಬಿಡುಗಡೆ!

ಬೆಂಗಳೂರು: ನಮ್ಮ ಸ್ಯಾಂಡಲ್‌ ವುಡ್‌ನಲ್ಲಿ ಅನೇಕ ಚಿತ್ರಗಳು ಬಿಡುಗಡೆಯಾಗುತ್ತಿದೆ. ಪ್ರಜ್ವಲ್ ದೇವರಾಜ್ ಮತ್ತು ಅದಿತಿ ಪ್ರಭುದೇವ ಅಭಿನಯದ ಲೋಹಿತ್ ಎಚ್ ನಿರ್ದೇಶನದ ಮಾಫಿಯಾ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ವೇಳೆ ಚಿತ್ರದ ಮೊದಲ ಹಾಡು ‘ತುಂಬಾನೆ ಕೇಳಲಾರೆ ಹಿಂದೆ ಬಿದ್ದು’ ಬಿಡುಗಡೆಯಾಗಿದೆ. ಹಾಡಿಗೆ ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ ಸಾಹಿತ್ಯವಿದ್ದು, ಅನೂಪ್ ಸೀಳಿನ್ ಅವರ ಸಂಗೀತವಿದೆ. ಹರಿಚರಣ್ ಅವರು ಹಾಡಿಗೆ ಧ್ವನಿಯಾಗಿದ್ದು, ಮುರಳಿ ಮಾಸ್ಟರ್ ಅವರ ನೃತ್ಯ ಸಂಯೋಜನೆಯಿದೆ. ಪ್ರಜ್ವಲ್ ದೇವರಾಜ್ ಅವರು ಗಣ, ಚೀತಾ ಮತ್ತು ಗುರುದತ್ತ ಗಾಣಿಗ ನಿರ್ದೇಶನದ ಮುಂಬರುವ ಕರಾವಳಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos