ಮಧ್ಯಪ್ರದೇಶದಲ್ಲಿ ಭಾರೀ ಮಳೆ

ಮಧ್ಯಪ್ರದೇಶದಲ್ಲಿ ಭಾರೀ ಮಳೆ

ಭೋಪಾಲ್, ಆ. 8 : ಮಧ್ಯಪ್ರದೇಶದ ಭೋಪಾಲ್ ಸೇರಿದಂತೆ ಒಟ್ಟು 29 ಜಿಲ್ಲೆಗಳಲ್ಲಿ ಮತ್ತು ಛತ್ತೀಸ್ಗಢದಲ್ಲಿಯೂ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಹವಾಮಾನ ಇಲಾಖೆ ಹಲವೆಡೆ ಆರೆಂಜ್ ಅಲರ್ಟ್ ನೀಡಿದ್ದು, ಇನ್ನೂ ಕೆಲವು ಭಾಗಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಮಧ್ಯಪ್ರದೇಶದ ಅನುಪ್ಪೂರ್, ದಿಂಡೋರಿ, ಉಮರಿಯಾ, ಶಹಡೋಲ್, ಕಾಟ್ನಿ, ಜಬಲ್ಪುರ್, ಮಾಂಡ್ಲಾ, ಬಾಲಘಾಟ್, ಚಿಂದ್ವಾರ, ಸಿಯೋನಿ, ಸಾಗರ್, ದಾಮೋ, ರೈಸನ್, ವಿದಿಶಾ, ಸೆಹೋರ್, ಹೋಶಂಗಾಬಾದ್, ಭೋಪಾಲ್ ಜಿಲ್ಲೆಗಳು ಸೇರಿವೆ.
ಹವಾಮಾನ ಇಲಾಖೆ ಛತ್ತೀಸ್ಗಢದಲ್ಲಿ ಕೂಡ ಆರೆಂಜ್ ಮತ್ತು ರೆಡ್ ಅಲರ್ಟ್ ನೀಡಿದೆ. ಮುಂದಿನ 24 ಗಂಟೆಗಳ ಕಾಲ ಛತ್ತೀಸ್ಗಢದ ರಾಯ್ಪುರ, ಬಲೋದಾ ಬಜಾರ್, ಮಹಾಸಮುಂಡ್, ಧಮ್ತಾರಿ, ನಾರಾಯಣಪುರ, ಬಸ್ತಾರ್, ಬಿಜಾಪುರ, ದಾಂತೇವಾಡ ಮತ್ತು ಸುಕ್ಮಾದಲ್ಲಿ ರೆಡ್ ಅಲರ್ಟ್ ನೀಡಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos